ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಅದೇ ಹಾಡ ಹಗಲೇ ಮೆಡಿಕಲ್ ಶಾಪ್ ಮಾಲೀಕರೊಬ್ಬರ ಮೇಲೆ ಮಚ್ಚು ಬೀಸಿರುವಂತ ಪುಂಡನೊಬ್ಬ ಹಪ್ತಾ ವಸೂಲಿ ಮಾಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಲಿಂಗರಾಜಪುರ ಬಳಿಯಲ್ಲಿ ಮೆಡಿಕಲ್ ಶಾಪ್ ಗೆ ಮಚ್ಚು ಹಿಡಿದು ತೆರಳಿರುವಂತ ಪುಂಡನೊಬ್ಬ, ಹಣ ಕೊಡು, ಇಲ್ಲ ಅಂದ್ರೆ ಮಚ್ಚಿನಿಂದ ಹಲ್ಲೆ ಮಾಡೋದಾಗಿ ಹೆದರಿಸಿದ್ದಾನೆ. ಮಚ್ಚು ಬೀಸಿ ಹಲ್ಲೆ ಮಾಡೋದಾಗಿ ಹೆದರಿಸಿದ್ದರಿಂದ ಹೆದರಿದಂತ ಮೆಡಿಕಲ್ ಶಾಪ್ ಮಾಲೀಕ, ಆತನಿಗೆ ಹಣ ನೀಡಿದ್ದಾನೆ ಎನ್ನಲಾಗಿದೆ.
ಇನ್ನೂ ಮಚ್ಚು ಬೀಸಿ ಮೆಡಿಕಲ್ ಶಾಪ್ ಶೋ ಕೇಸ್ ಗ್ಲಾಸ್ ಕೂಡ ಒಡೆದಿರುವಂತ ಪುಂಡ, ಕೆಲ ಕಾಲ ಆತಂಕ ಸೃಷ್ಠಿಸುವಂತೆ ಮಾಡಿದ್ದಾನೆ. ಆತನ ವರ್ತನೆಯಿಂದ ಬೆಚ್ಚಿ ಬಿದ್ದಂತ ಮೆಡಿಕಲ್ ಶಾಪ್ ಮಾಲೀಕ ಹಣ ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ಅಲ್ಲಿಂದ ಕಾಲ್ ಕಿತ್ತಿರೋದಾಗಿ ಹೇಳಲಾಗುತ್ತಿದೆ.
ಮಚ್ಚು ಬೀಸಿ ಪುಂಡಾಟ ಮೆರೆದಂತ ಪುಂಡನ ಕೃತ್ಯ ಮೆಡಿಕಲ್ ಶಾಪ್ ನಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
BREAKING : ಕೊನೆಗೂ ‘ಲುಫ್ತಾನ್ಸ’ ಫ್ಲೈಟ್ ಏರಿದ ಪ್ರಜ್ವಲ್ : ಮ್ಯೂನಿಕ್ ಏರ್ಪೋರ್ಟ್ ನಿಂದ ವಿಮಾನ ಟೇಕ್ ಆಫ್!
ರೈಲ್ವೆ ಪ್ರಯಾಣಿಕರೇ ಗಮನಿಸಿ: ಹುಬ್ಬಳ್ಳಿಗೆ ಆಗಮಿಸುವ ರೈಲುಗಳ ಸಮಯ ಬದಲಾವಣೆ