ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಿಂದ 3:30ಕ್ಕೆ ಅಲ್ಲಿಂದ ವಿಮಾನ ಟೆಕ್ ಆಫ್ ಅಗಲಿದ್ದು ಮಧ್ಯರಾತ್ರಿ 12:30 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಂದ ತಕ್ಷಣ ಅವರ ಬಂಧನಕ್ಕೆ ಎಸ್ಐಟಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ ಬರುತ್ತಿದ್ದಂತೆ ಬಂಧನ ಖಚಿತ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಇದೀಗ ಎಸ್ ಐ ಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಈಗಾಗಲೇ ಠಿಕಾಣಿ ಹೂಡಿದ್ದಾರೆ. ಪ್ರಜ್ವಲ್ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. ಹಾಗಾಗಿ ಬೆಂಗಳೂರಿಗೆ ಬರುತ್ತಿದ್ದಂತೆ ಇಮಿಗ್ರೇಶನ್ ನಲ್ಲಿ ಪ್ರಜ್ವಲ್ ರನ್ನು ವಶಕ್ಕೆ ಪಡೆಯಲಾಗುತ್ತದೆ.
ಅದಾದ ನಂತರ ಇಮಿಗ್ರೇಶನ್ ಅಧಿಕಾರಿಗಳು SIT ವಶಕ್ಕೆ ನೀಡಲಿದ್ದಾರೆ.ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಬೆಂಗಳೂರಿನ ಪೊಲೀಸರ ಜೊತೆ ಕೂಡ ಪ್ರಮುಖ ಸಭೆ ನಡೆಸಲಾಗುತ್ತಿದ್ದು ಅವರ ಬಂಧನ ನಂತರ ಮುಂದೆಲ್ಲ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತು ಈಗಾಗಲೇ ಸಭೆ ನಡೆಯುತ್ತಿದೆ.