ಬೆಳಗಾವಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಿನ್ನೆ ಬಾಳು ಮಾಮ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ವೇಳೆ ಪ್ರಸಾದ ಸೇವಿಸಿದ ಜನರು ವಾಂತಿ ಭೇಧಿಯಿಂದ ಅಸ್ವಸ್ಥರಾಗಿದ್ದರು. ಜಾತ್ರೆಯಲ್ಲಿ ಸಾವಿರಾರು ಜನರು ನಿನ್ನೆ ಪ್ರಸಾದವನ್ನು ಸೇವಿಸಿದ್ದರು ಎನ್ನಲಾಗಿದೆ.
ಅಲ್ಲದೆ ಮಧ್ಯಾಹ್ನ ಕೂಡ ಉಳಿದಿದ್ದ ಅಡುಗೆಯನ್ನ ರಾತ್ರಿಯೂ ಜನರು ಸೇವಿಸಿದ್ದಾರೆ. ಇದೀಗ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 59ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಇನ್ನು ಹಲವು ಜನರಿಗೆ ವಾಂತಿ ಭೇದಿ ಆಗುತ್ತಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.