ಬೆಂಗಳೂರು : ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರುಪಾಯಿ ಹಾಗೂ ತಿಂಗಳಿಗೆ 8 ಸಾವಿರ ಖಾತೆಗೆ ಹಾಗಲಾಗುತ್ತದೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದಕ್ಕೆ ಟ್ವೀಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಈಗ ಬಿವೈ ವಿಜಯೇಂದ್ರ ಟ್ವೀಟಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಕಾಂಗ್ರೆಸ್ ಎಂದಿಗೂ “15 ಲಕ್ಷದ ಜುಮ್ಲಾ“ ಸುಳ್ಳುಗಳನ್ನು ಹೇಳಿಲ್ಲ ಎಂದಿದೆ.
ಟ್ವೀಟ್ ನಲ್ಲಿ ಕಾಂಗ್ರೆಸ್ ಮಾನ್ಯ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರೇ, ಜನ ಕಾಂಗ್ರೆಸ್ ಮೇಲೆ ಇಟ್ಟಿರುವ ನಂಬಿಕೆಯನ್ನು ನೋಡಿ ತಮಗೆ ಸಹಿಸಿಕೊಳ್ಳಲಾಗದಷ್ಟು ತಾಪಮಾನ ಏರುತ್ತಿದೆ! ಜನತೆಗೆ ಈಗಾಗಲೇ ನಾವು “ನುಡಿದಂತೆ ನಡೆಯುತ್ತೇವೆ“ ಎಂಬುದು ಖಾತ್ರಿಯಾಗಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಸಹ ಜನರಿಗೆ ಖಚಿತವಾಗಿದೆ.
ಗೃಹಲಕ್ಷ್ಮಿಯಂತೆ ”ಮಹಾಲಕ್ಷ್ಮಿ” ಯೋಜನೆಯೂ ಜಾರಿ ಮಾಡುವುದರ ಬಗ್ಗೆ ಜನತೆಗೆ ಅನುಮಾನ ಉಳಿದಿಲ್ಲ, ಏಕೆಂದರೆ ಕಾಂಗ್ರೆಸ್ ಎಂದಿಗೂ “15 ಲಕ್ಷದ ಜುಮ್ಲಾ“ ಸುಳ್ಳುಗಳನ್ನು ಹೇಳಿಲ್ಲ! ಅಂದಹಾಗೆ ಬಿವೈ ವಿಜಯೇಂದ್ರ ಅವರೇ, ನೋಟ್ ಬ್ಯಾನ್ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತು ಬಿಸಿಲಲ್ಲಿ ಪರದಾಡಿದಾಗ, ನೂರಾರು ಜನರು ಪ್ರಾಣ ಬಿಟ್ಟಾಗ, ದೆಹಲಿ ರಸ್ತೆಯಲ್ಲಿ 700ಕ್ಕೂ ಅಧಿಕ ರೈತರು ಜೀವ ಬಿಟ್ಟಾಗ ನಿಮ್ಮ ಈ ಕಾಳಜಿ, ಆಕ್ರೋಶ ಎಲ್ಲಿ ಅಡಗಿ ಕುಳಿತಿತ್ತು? ಎಂದು ತಿರುಗೇಟು ನೀಡಿದೆ.
ಮಾನ್ಯ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರೇ, ಜನ ಕಾಂಗ್ರೆಸ್ ಮೇಲೆ ಇಟ್ಟಿರುವ ನಂಬಿಕೆಯನ್ನು ನೋಡಿ ತಮಗೆ ಸಹಿಸಿಕೊಳ್ಳಲಾಗದಷ್ಟು ತಾಪಮಾನ ಏರುತ್ತಿದೆ!
ಜನತೆಗೆ ಈಗಾಗಲೇ ನಾವು “ನುಡಿದಂತೆ ನಡೆಯುತ್ತೇವೆ“ ಎಂಬುದು ಖಾತ್ರಿಯಾಗಿದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಸಹ ಜನರಿಗೆ ಖಚಿತವಾಗಿದೆ,
ಗೃಹಲಕ್ಷ್ಮಿಯಂತೆ… https://t.co/OESDmNZqs1
— Karnataka Congress (@INCKarnataka) May 30, 2024