ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಭೀಕರವಾಗಿ ಕೊಲೆ ನಡೆದರು ಕೂಡ ಪೊಲೀಸರು ನಿದ್ದೆಗಣ್ಣಲ್ಲಿ ಇದ್ದಾರೆ. ಎರಡು ಕೊಲೆಗಳು ಆದ ಬಳಿಕವೂ ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಬೆಚ್ಚಿ ಬಿಡಿಸುವಂತಹ ಘಟನೆ ನಡೆದಿದ್ದು, ಮಹಿಳೆಯನ್ನು ಅರೆಬೆತ್ತಲೆ ಗೊಳಿಸಿ ಎಂಟು ಜನರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಮಾರುತಿ ನಗರದ ಸೆಕೆಂಡ್ ಕ್ರಾಸ್ ಬಳಿ ಖಾಸಗಿ ಆಸ್ಪತ್ರೆ ಬಳಿ ನಡೆದಿದೆ.
ಹೌದು ಹುಬ್ಬಳ್ಳಿಯ ಮಾರುತಿ ನಗರದ ಸೆಕೆಂಡ್ ಕ್ರಾಸ್ ಬಳಿ ಖಾಸಗಿ ಆಸ್ಪತ್ರೆ ಹತ್ತಿರ, ಮೇ 25 ರಂದು ಸಾಯಂಕಾಲ ಕ್ಷುಲ್ಲಕ ಕಾರಣಕ್ಕೆ ಎಲಿಜಿಬತ್ ಎಂಬ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲೇ ಅರೆ ಬೆತ್ತಲೆಗೊಳಿಸಿ ಎಂಟು ಜನರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇನ್ನು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ ಕಾಳೆ, ಸಾಗರ, ನಾಗರತ್ನ, ಪೂಜಾ, ಸೀನು, ರೇಣುಕಾ, ಶಾಂತಮ್ಮಾ ಹಾಗೂ ರಾಜೇಶ್ವರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಮಹಿಮೆ ಮೇಲೆ ಹಲ್ಲೆ ನಡೆಸಿದವರ ಪೈಕಿ ಓರ್ವ ಮಹಿಳೆಯು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆ ಕುರಿತಂತೆ ಇದೀಗ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಐಪಿಸಿ 323, 324, 307, 341, 504, ಹಾಗೂ 506 ಅಡಿಯಲ್ಲಿ ಎಂಟು ಜನರ ವಿರುದ್ದ ದೂರು ದಾಖಲಾಗಿದೆ.
ಅಲ್ಲದೆ ಇತ್ತೀಚಿಗೆ ಬೆಳಗಾವಿಯ ವಂಟಮೂರಿ ಎಂಬ ಗ್ರಾಮದಲ್ಲಿ ಮಹಿಳೆಯ ಮಗ ಬೇರೊಬ್ಬ ಮನೆಯ ಯುವತಿಯನ್ನು ಪ್ರೀತಿಸಿ ಓಡಿಸಿಕೊಂಡು ಹೋಗಿದ್ದ ಎಂಬ ಕಾರಣಕ್ಕೆ ಮಹಿಳೆಯ ಮನೆ ಮೇಲೆ ಯುವತಿಯ ಸಂಬಂಧಿಕರು ದಾಳಿ ಮಾಡಿ ಮಹಿಳೆಯನ್ನು ಹೊರಗಡೆ ಎಳೆದು ತಂದು ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಭೀಕರವಾಗಿ ಹಲ್ಲೆ ನಡೆಸಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಕೂಡ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ.