ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ.
ಪ್ರಜ್ವಲ ಸಲ್ಲಿಸಿರುವ ಅರ್ಜಿಯನ್ನು ವಿಚಾರ ನಡೆಸಿದ ನ್ಯಾಯಾಲಯವು ಇದೀಗ ಮೇ 31ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಈ ವೇಳೆ ನ್ಯಾಯಾಲಯ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿದೆ. ಇಮೇಲ್ ಮೂಲಕ ವಕೀಲರು ವಕಾಲತ್ತು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.ಇಮೇಲ್ ಮೂಲಕ ವಕೀಲರು ಪ್ರಜ್ವಲ್ ವಕಾಲತನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.ಹಾಗಾಗಿ ಇದೀಗ ವಿಚಾರಣೆಯನ್ನು ಕೋರ್ಟ್ ಮೇ 31ಕ್ಕೆ ಮುಂದೂಡಿದೆ
ಮೂರು ಪ್ರಕರಣಗಳಲ್ಲಿ ನಿರೀಕ್ಷಣ ಜಾಮೀನುಗೆ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಠಾಣೆ ಕ್ರೈಂ ನಂಬರ್ 20/2024 ಸೈಬರ್ ಕ್ರೈಂ ಠಾಣೆ ಕ್ರೈಂ ನಂಬರ್ 2/ 2024 ಹಾಗೂ ಹೊಳೆನರಸೀಪುರ ಠಾಣೆ ಕ್ರೈಂ ನಂಬರ್ 107/ 2024 ಸೇರಿದಂತೆ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.