ಶಿವಮೊಗ್ಗ : ವಾಲ್ಮೀಕಿ ನಿಗಮ ಮಂಡಳಿ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸಿಐಡಿ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದು, ವಿನೋಬನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ಆರು ಮಂದಿ ತಂಡ ಭೇಟಿ ನೀಡಿ, ಮೃತ ಅಧಿಕಾರಿ ಚಂದ್ರಶೇಖರನ್ ಪತ್ನಿ ಕವಿತಾರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಚಂದ್ರಶೇಖರ ನಿವಾಸದಲ್ಲಿ ಬೆಳಿಗ್ಗೆಯಿಂದ CID ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.
ಇದೀಗ ಚಂದ್ರಶೇಖರ ನಿವಾಸದಿಂದ ತೆರಳಿದ್ದಾರೆ. ಸಿಐಡಿ ಅಧಿಕಾರಿಗಳು ಬೆಳಗ್ಗೆ 10:30ಕ್ಕೆ ಸಿಐಡಿ ತಂಡ ಚಂದ್ರಶೇಖರ ನಿವಾಸಕ್ಕೆ ಆಗಮಿಸಿತ್ತು. ಸುಮಾರು ಎರಡುವರೆ ಗಂಟೆ ಸಿಐಡಿ ಅಧಿಕಾರಿಗಳು ಪತ್ನಿ ಕವಿತಾ ಅವರನ್ನ ವಿಚಾರಣೆ ನಡೆಸಿದರು. ಈ ವೇಳೆ ಚಂದ್ರಶೇಖರ್ ಗೆ ಸೇರಿದ ಲ್ಯಾಪ್ಟಾಪ್ ಪ್ರಿಂಟರ್ ಕೊಂಡವಿದೆ ಸಿಐಡಿ ವಿಚಾರಣೆ ನಡೆಸಿ ಚಂದ್ರಶೇಖರ್ ಮನೆಯಿಂದ ಸಿಐಡಿ ತಂಡ ತೆರಳಿದೆ.
ಸಾಕ್ಷಾಧಾರ ಪರಿಶೀಲನೆ ವೇಳೆ ದೊರಕಿದ ಚಂದ್ರಶೇಖರನ್ ಬ್ಯಾಗ್, ಬ್ಯಾಗ್ನಲ್ಲಿದ್ದ ಪೆನ್ ಡ್ರೈವ್ ಹಾಗೂ ಲ್ಯಾಪ್ಟಾಪ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪೆನ್ ಡ್ರೈವ್ ಮೇಲೆ ಪದ್ಮನಾಭ್ ಎಂದು ಬರೆದಿದೆ ಎನ್ನಲಾಗಿದೆ. ಇನ್ನು ಪೆನ್ ಒಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.