ಬೆಂಗಳೂರು : ವೀರ ಸಾವರ್ಕರ್ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಮಾಗಡಿ ರೋಡಿನ ಯುವಕ ಸೇರಿದಂತೆ ಮೂವರನ್ನು ಯಲಹಂಕ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹೌದು ವೀರ ಸಾವರ್ಕರ ಜನ್ಮದಿನದ ಮಸಿ ಬಳಿದಿದ್ದ ಮೂವರನ್ನು ಇದೀಗ ಬಂಧಿಸಲಾಗಿದೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಸಾವರ್ಕರ್ ಮೇಲ್ ಸೇತುವೆ ವೀರ ಸಾವರ್ಕರ ಜನ್ಮ ದಿನದಂದೇ ಮಸಿ ಬೆಳೆದಿದ್ದ ಮೂವರನ್ನು ಬಂಧಿಸಿದ್ದಾರೆ. ಸಾವರ್ಕರ್ ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್ ಗೆ ಸಿಗುತ್ತಿಲ್ಲ. ಸಾವರ್ಕರ್ ಸೇತುವೆ ಬದಲು ಭಗತ್ ಸಿಂಗ್ ಹೆಸರುಡುವಂತೆ ಆಗ್ರಹಿಸಿದ್ದಾರೆ.
ಮಧ್ಯಾಹ್ನ 1.50ಕ್ಕೆ ಪುಂಡರು ಸಾವರ್ಕರ್ ಸೇತುವೆಗೆ ಮಸಿ ಬಳೆದಿದ್ದರು. ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಸಂಚಾರ ತಡೆ ನಡೆಸಿದ್ದರು. ಈ ವೇಳೆ ವೀರಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಬಳಿಕ ಸೇತುವೆಗೆ ಭಗತ್ ಸಿಂಗ್ ಮೇಲ್ಸೇತುವೆ ಹೆಸರಿನ ಬ್ಯಾನರ್ ಹಾಕಿದ್ದಾರೆ.
ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಕೃತ್ಯ ಎಸಗಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.