ಹಾಸನ: ಕಾಡಾನೆಯನ್ನು ಸೆರೆ ಹಿಡಿಯೋ ಕಾರ್ಯಾಚರಣೆಯ ವೇಳೆ ಕಾದಾಟದಲ್ಲಿ ದಸಹಾ ಆನೆ ಅರ್ಜುನ ಸಾವನ್ನಪ್ಪಿತ್ತು. ಈ ಆನೆಯ ಸಮಾಧಿಯನ್ನು ಅದೇ ಸ್ಥಳದಲ್ಲಿ ಮಾಡಲಾಗಿತ್ತು. ಇಂತಹ ಸಮಾಧಿಯನ್ನು ಕೆಲ ಕಿಡಿಗೇಡಿಗಳು ವಿರೋಪಗೊಳಿಸಿದ್ದರು. ಅಂತವರ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ವಲಯ ಅರಣ್ಯದಲ್ಲಿ ದಸರಾ ಆನೆ ಅರ್ಜುನನ್ನು ಸಮಾಧಿ ಮಾಡಲಾಗಿತ್ತು. ಈ ಸಮಾಧಿಯನ್ನು ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಮೀಸಲು ಅರಣ್ಯದೊಳಗೆ ಪ್ರವೇಶಿಸಿ, ಅರ್ಜುನನ ಸಮಾಧಿಯನ್ನು ವಿರೂಪಗೊಳಿಸಿದ್ದರು.
ಈ ಹಿನ್ನಲೆಯಲ್ಲಿ ಮೀಸಲು ಅರಣ್ಯವಾಗಿದ್ದರೂ ಅತಿಕ್ರಮವಾಗಿ ಪ್ರವೇಶ ಮಾಡಿ ದಸರಾ ಆನೆ ಅರ್ಜುನನ ಸಮಾಧಿ ವಿರೂಪಗೊಳಿಸಿದ್ದರಿಂದ ಯಸಳೂರು ವಲಯ ಅರಣ್ಯಾಧಿಕಾರಿ ಹೆಚ್.ಡಿ ಕೋಟೆ ನವೀನ್ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ, ಎಫ್ಐಆರ್ ದಾಖಲಾಗಿದೆ.
ನಾಳೆಯಿಂದ ರಾಜ್ಯಾಧ್ಯಂತ ಶಾಲೆಗಳು ಪುರಾರಂಭ: ಮೇ.31ರಂದು ವಿದ್ಯಾರ್ಥಿಗಳಿಗೆ ‘ಸಿಹಿಯೂಟ’ದ ವ್ಯವಸ್ಥೆ
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case