ಬೆಂಗಳೂರು: ಬೇಸಿಗೆ ರಜೆಯ ಬಳಿಕ, ನಾಳೆಯಿಂದ ರಾಜ್ಯಾಧ್ಯಂತ ಶಾಲೆಗಳು ಪುನರಾರಂಭವಾಗುತ್ತಿವೆ. ನಾಳೆಯಿಂದ ಆರಂಭಗೊಳ್ಳುವಂತ ಶಾಲೆಗಳಿಗೆ ವಿದ್ಯಾರ್ಥಿಗಳು ಆಗಮಿಸೋದನ್ನು ಸ್ವಾಗತ ಮಾಡೋದಕ್ಕೆ ಶಾಲೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮೇ.31ರಂದು ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸಿಹಿಯೂಟದ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಅಂತ ತಿಳಿಸಿದೆ.
2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದೆ ಎಂದು ಹೇಳಿದೆ.
ಸೋ ಮೇ.29ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊಳ್ಳಲಿದ್ದಾವೆ. ಮೇ.31ರಂದು ಮಕ್ಕಳಿಗೆ ಪ್ರಾರಂಭೋತ್ಸವದ ಸಿಹಿಯೂಟ ಕೂಡ ಸಿಗಲಿದೆ. ಹೀಗಾಗಿ ವಿದ್ಯಾರ್ಥಿಗಳೇ ಶಾಲೆ ತೆರಳಿ, ಪಾಠ, ಆಟದೊಂದಿಗೆ ನಲಿಯುತ್ತಾ, ಸಂತಸದ ಕಲಿಕೆ ಮುಂದುವರೆಸೋದು ಮರೆಯಬೇಡಿ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ: ತಕ್ಷಣ ಸಚಿವ ನಾಗೇಂದ್ರ ವಜಾಗೆ ಸಿ.ಟಿ ರವಿ ಆಗ್ರಹ
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case