ಬೆಂಗಳೂರು: ಭವಾನಿ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ನಡೆಸಿತು. ಈ ವೇಳೆಯಲ್ಲಿ ಕೋರ್ಟ್ ಗೆ ನಾಳೆಯವರೆಗೂ ಆಕ್ಷೇಪಣೆ ಸಲ್ಲಿಸೋದಕ್ಕೆ ಅವಕಾಶ ಕೋರಿತ್ತು. ಹೀಗಾಗಿ ನಾಳೆಗೆ ಪ್ರಕರಣದ ವಿಚಾರಣೆ ಮುಂದೂಡಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮೈಸೂರಿನ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣ ಸಂಬಂಧ ಭವಾನಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆಯಲ್ಲಿ ಎಸ್ಐಟಿ ಪರ ಎಸ್ ಪಿಪಿ, ಆಕ್ಷೇಪಣೆ ಸಲ್ಲಿಸಲು ನಾಳೆಯವರೆಗೆ ಕಾಲಾವಕಾಶವನ್ನು ನ್ಯಾಯಪೀಠಕ್ಕೆ ಕೋರಿದರು.
ಈ ಸಂದರ್ಭದಲ್ಲಿ ಭವಾನಿ ರೇವಣ್ಣ ಪರ ವಕೀಲ ಸಂದೇಶ್ ಚೌಟ ಅವರು, ಕೆ ಎಂಎಫ್ ನಿವೃತ್ತ ಅಧಿಕಾರಿಯೊಬ್ಬರನ್ನು 7ನೇ ಆರೋಪಿಯನ್ನಾಗಿ ಮಾಡಲಾಗಿದೆ. ಎಸ್ಐಟಿ ವಿರುದ್ಧ ದೂರು ನೀಡಿದವರನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ಭವಾನಿ ರೇವಣ್ಣಗೆ ಬಂಧನದಿಂದ ರಕ್ಷಣೆ ನೀಡಲು ಮನವಿ ಮಾಡಿದರು.
ಈ ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಭವಾನಿ ರೇವಣ್ಣ ವಿರುದ್ಧದ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
‘ಕಾಂಗ್ರೆಸ್ ಪಕ್ಷ’ದವರು ‘ಭ್ರಷ್ಟಾಚಾರದ ಪಿತಾಮಹ’ರೆಂದು ಋಜುವಾತು- ಬಿ.ವೈ.ವಿಜಯೇಂದ್ರ
ಬಾಗಲಕೋಟೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ : ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆ