ತುಮಕೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ, ತುಮಕೂರು ಜಿಲ್ಲೆಯಲ್ಲಿ ಮೀರಿಸಂಹಿತೆಯನ್ನು ಗಾಳಿಗೆ ತೂರಿ ಬೆಳ್ಳಂಬೆಳಗ್ಗೆ ಮಧ್ಯ ಮಾರಾಟ ಮಾಡಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ರಸ್ತೆಯಲ್ಲಿ ಓಡಾಡುವ ಮಹಿಳೆಯರು ಹಾಗೂ ಮಕ್ಕಳು ವಿದ್ಯಾರ್ಥಿಗಳಿಗೆ ಮುಜುಗರ ಉಂಟಾಗಿದ್ದು ಗುಬ್ಬಿ ಪಟ್ಟಣದ ರಾಘವೇಂದ್ರ ವೈನ್ಸ್, ಸಿವಿಆರ್ ಲಿಕ್ಕರ್ ಶಾಪ್ ಹಾಗೂ ಚಾಮುಂಡಿ ವೈನ್ಸ್ ಮಾಲೀಕರಿಂದ ನೀತಿ ಸಂಹಿತೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಾರ್ ಮಾಲೀಕರ ಭಂಡತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದರು ಯಾವುದೇ ರೀತಿಯಾದಂತಹ ಕ್ರಮ ತೆಗೆದುಕೊಂಡಿಲ್ಲ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.