ಚಿಕ್ಕಬಳ್ಳಾಪುರ : ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ? ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ರೂ ಶಿಕ್ಷೆಯಾಗಲಿ. ಪೆನ್ಡ್ರೈವ್ ಹಂಚಿದವರ ತಪ್ಪು ಇಲ್ಲ ಅಂತಾ ಸಿಎಂ ಹೇಳಿದ್ದಾರೆ. ಪೆನ್ಡ್ರೈವ್ ಹಂಚಿದವರ ರಕ್ಷಣೆಗೆ ಇದ್ದೇವೆಂದು ಹೇಳಿದಂತಾಗಿದೆ. ನೊಂದವರಿಗೆ ಸರ್ಕಾರ ಏನು ಸಾಂತ್ವನ ಹೇಳ್ತಿದೆ ವಾಗ್ದಾಳಿ ಮಾಡಿದ್ದಾರೆ.
ಒಂದು ಚುನಾವಣೆ ಗೆಲ್ಲಲು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ? ಪ್ರಜ್ವಲ್ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಸರ್ಕಾರ ಸಿಕ್ಕಿ ಹಾಕಿಕೊಳ್ಳುತ್ತದೆ. ಪೆನ್ಡ್ರೈವ್ ಹಂಚಿದವರು ಸಿಕ್ಕಿ ಬೀಳ್ತಾರೆ, ಅದಕ್ಕೆ ಸಿಬಿಐಗೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.