ಬೆಂಗಳೂರು: 9ನೇ ತರಗತಿಯ ಬಾಲಕಿಯ ನಗ್ನ ಚಿತ್ರಗಳನ್ನು ಅನಾಮಧೇಯ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪದ ಮೇಲೆ ಬೆಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಪೋಷಕರು ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನ ನೋಡಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ವರದಿಯ ಪ್ರಕಾರ, ಬಾಲಕಿಯ ಎಐ-ರಚಿಸಿದ ನಗ್ನ ಚಿತ್ರಗಳು ಇನ್ಸ್ಟಾಗ್ರಾಮ್ನಲ್ಲಿ ಕಾಣಿಸಿಕೊಂಡ ನಂತರ ಅವಳ ಸ್ನೇಹಿತರು ಅವಳನ್ನು ಎಚ್ಚರಿಸಿದ್ದಾರೆ. ಖಾಸಗಿ ಖಾತೆಯಾದ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಅವಳ ಫೋಟೋಗಳನ್ನು ಬಳಸಿಕೊಂಡು ನಕಲಿ ಚಿತ್ರಗಳನ್ನು ತಯಾರಿಸಲಾಗಿದೆ. ಬಾಲಕಿಯ ಪೋಷಕರು ಇದು ಆಂತರಿಕ ಕೆಲಸ ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಏತನ್ಮಧ್ಯೆ, ಅದೇ ತರಗತಿಯ ಇನ್ನೊಬ್ಬ ಹುಡುಗಿಯ ಚಿತ್ರವನ್ನು ಅಪರಿಚಿತ ವ್ಯಕ್ತಿ ಮಾರ್ಫಿಂಗ್ ಮಾಡಿದ್ದಾನೆ ಆದರೆ ಆಕೆಯ ಪೋಷಕರು ಯಾವುದೇ ದೂರು ದಾಖಲಿಸಿಲ್ಲ.