ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ಹತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನೇಹ ಹಿರೇಮಠ ತಂದೆ ನಿರಂಜನ್ ಹಿರೇಮಠ ಅವರನ್ನು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಗೆ ವಿಚಾರಣೆಗೆ ಬರುವಂತೆ ನೇಹಾ ತಂದೆ ನಿರಂಜನನ್ ಹಿರೇಮಠ್ ಗೆ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ನಿರಂಜನ್ ಹಿರೇಮಠ ಹೋರಾಟ ಮಾಡಿದ್ದರು ಎನ್ನಲಾಗಿದೆ.
ಆರೋಪಿ ವಿಶ್ವನ ವಿಚಾರಣೆ
ಅಲ್ಲದೆ ಅಂಜಲಿ ಅಂಬಿಗೇರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಐಬಿಯಲ್ಲಿ ಸಿಐಡಿ ಇಂದ ಆರೋಪಿ ವಿಶ್ವನ ವಿಚಾರಣೆ ನಡೆಯುತ್ತಿದೆ. ಮುಂಜಾನೆಯಿಂದ ಸಂಜೆಯವರೆಗೂ ಐಬಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಂಜಲಿ ಕೊಲೆ ಬಳಿಕ ಮತ್ತೊಬ್ಬ ಮಹಿಳೆಗೆ ವಿಶ್ವ ಚಾಕು ಇರಿದಿದ್ದ. ಚಲಿಸುತ್ತಿದ್ದ ರೈಲಿನಲ್ಲಿ ಗದಗ ಮೂಲದ ಲಕ್ಷ್ಮಿ ಎನ್ನುವ ಮಹಿಳೆಗೆ ಚಾಕು ಇರಿದಿದ್ದ.
ಚಾಕುವಿರದಕ್ಕೆ ಒಳಗಾಗಿದ್ದು ಲಕ್ಷ್ಮಿಯನ್ನು ಇದೀಗ ಅಧಿಕಾರಿಗಳು ಐವಿಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಹಂತಕನ ಮುಂದೆ ಘಟನೆ ಯ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ವಿಚಾರಣೆ ಬಳಿಕ ಗದಗಕ್ಕೆ ಲಕ್ಷ್ಮಿ ತೆರಳಿದ್ದಾರೆ ಹಂತಕ ವಿಶ್ವನನ್ನು ಐಬಿನಿಂದ ಬೆಂಡಿಗೇರಿ ಠಾಣೆಗೆ ಸ್ಥಳಾಂತರಿಸಲಾಗಿದೆ.