ಬೆಂಗಳೂರು : ಬೆಂಗಳೂರು: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇ ದಿನೇ ಬೈಕ್ನಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚುತ್ತಿದೆ. ಬೆಂಗಳೂರು ಹೊರವಲಯ ನೆಲಮಂಗಲ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಶೋಕಿ ಜಾಸ್ತಿಯಾಗಿದೆ. ಇವರ ಭಯಾನಕ ಡೆಡ್ಲಿ ವ್ಹೀಲಿಂಗ್ಗೆ ವಾಹನ ಸವಾರರಿಗೆ ಆತಂಕ ಶುರುವಾಗಿದೆ.
ಬೆಂಗಳೂರಿನ ನೆಲಮಂಗಲ ಟೌನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು ರೀಲ್ಸ್ ಹುಚ್ಚಿಗಾಗಿ ವ್ಹೀಲಿಂಗ್ ಮಾಡುವ ಹುಚ್ಚಾಟ ಹೆಚ್ಚಾಗಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಪ್ರತಿನಿತ್ಯ ರಾತ್ರಿಯಾಯ್ತು ಅಂದರೆ ಬೆಂಗಳೂರು ನಗರದಿಂದ ಬೈಕ್ ಹಾವಳಿ ಪುಂಡರು ಬರುತ್ತಾರೆ. ಈ ಪುಂಡರು ಒಂದೇ ಚಕ್ರದಲ್ಲಿ ಭಯಾನಕ ಡೆಡ್ಲಿ ವ್ಹೀಲಿಂಗ್ ಮಾಡುತ್ತಾರೆ. ಇಂತಹ ಪುಂಡರ ಹಾವಳಿ ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.