ನವದೆಹಲಿ : ಶನಿವಾರ (ಮೇ 25) ನಡೆದ ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಶೇಕಡಾ 61.20 ರಷ್ಟು ಮತದಾನವಾಗಿದೆ, ಇದು ಇಲ್ಲಿಯವರೆಗೆ ಎಲ್ಲಾ ಹಂತಗಳಿಗಿಂತ ಕಡಿಮೆ ಎಂದು ರಾತ್ರಿ 11:45 ರವರೆಗಿನ ಅಂಕಿ ಅಂಶಗಳು ತಿಳಿಸಿವೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಹಂತದಲ್ಲಿ ಶೇ.64.4ರಷ್ಟು ಮತದಾನವಾಗಿತ್ತು. ಉತ್ತರ ಪ್ರದೇಶದಲ್ಲಿ ಆರನೇ ಹಂತದಲ್ಲಿ ಶೇ.54.03ರಷ್ಟು ಮತದಾನವಾಗಿದೆ. ಜಾರ್ಖಂಡ್ನಲ್ಲಿ ಶೇ.63.76, ಉತ್ತರಪ್ರದೇಶದಲ್ಲಿ ಶೇ.54.03, ಬಿಹಾರದಲ್ಲಿ ಶೇ.55.24, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.54.3, ಹರ್ಯಾಣದಲ್ಲಿ ಶೇ.60.4, ಒಡಿಶಾದಲ್ಲಿ ಶೇ.69.56, ದಿಲ್ಲಿಯಲ್ಲಿ ಶೇ.57.67ರಷ್ಟು ಮತದಾನವಾಗಿದೆ.
58 ಲೋಕಸಭಾ ಕ್ಷೇತ್ರಗಳಿಗೆ ನಡೆದ ಆರನೇ ಹಂತದ ಚುನಾವಣೆಯಲ್ಲಿ ಸಂಜೆ 7.45ರ ವೇಳೆಗೆ ಶೇ.59.06ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಶೇ.78.19, ಜಾರ್ಖಂಡ್ನಲ್ಲಿ ಶೇ.62.74, ಒಡಿಶಾದಲ್ಲಿ ಶೇ.60.07, ಹರ್ಯಾಣದಲ್ಲಿ ಶೇ.58.37, ದಿಲ್ಲಿಯಲ್ಲಿ ಶೇ.54.48, ಉತ್ತರಪ್ರದೇಶದಲ್ಲಿ ಶೇ.54.03, ಬಿಹಾರದಲ್ಲಿ ಶೇ.53.30, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.52.28ರಷ್ಟು ಮತದಾನವಾಗಿದೆ. ಆರನೇ ಹಂತದಲ್ಲಿ ಬಿಹಾರದ 8, ಹರಿಯಾಣದ 10, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್ನ 4, ದೆಹಲಿಯ 7, ಒಡಿಶಾದ 6, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್-ರಾಜೌರಿ, ಪಶ್ಚಿಮ ಬಂಗಾಳದ ತಮ್ಲುಕ್, ಮೇದಿನಿಪುರ, ಹರಿಯಾಣದ ಕರ್ನಾಲ್, ಕುರುಕ್ಷೇತ್ರ, ಗುರ್ಗಾಂವ್, ರೋಹ್ಟಕ್ ಮತ್ತು ಒಡಿಶಾದ ಭುವನೇಶ್ವರ, ಪುರಿ ಮತ್ತು ಸಂಬಲ್ಪುರ ಇತರ ಪ್ರಮುಖ ಕ್ಷೇತ್ರಗಳಾಗಿವೆ.