ಗುಜರಾತ್ : ಇಂದು ಸಂಜೆ ಗುಜರಾತಿನ ರಾಜ್ಕೋಟ್ ನಲ್ಲಿ ಗೇಮಿಂಗ್ ಜೋನ್ ನಲ್ಲಿ ಭಾರಿ ಅಗ್ನಿವಗಡ ಸಂಭವಿಸಿ 9 ಮಕ್ಕಳು ಮಹಿಳೆಯರು ಸೇರಿ 24 ಜನರು ಸಚಿವ ದಹನ ಹೊಂದಿದ್ದಾರೆ. ಘಟನೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತೀವ್ರ ನೊಂದಿದ್ದೇವೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇವೆ. ಗಾಯಗೊಂಡವರಿಗೆ ಪ್ರಾರ್ಥನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸ್ಥಳೀಯ ಆಡಳಿತ ಕಾರ್ಯೋನ್ಮುಖವಾಗಿದೆ.ಘಟನೆ ಕುರಿತಂತೆ 24 ಗಂಟೆಯಲ್ಲಿ ವರದಿ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.ಇದೆ ವೇಳೆ ಗೇಮಿಂಗ್ ಝೋನ್ ಮಾಲೀಕ ಸರಿ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
ದುರಂತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.ರಾಜಕೋಟ್ ನಲ್ಲಿ ಅಗ್ನಿ ದುರಂತ ನಮ್ಮೆಲ್ಲರಿಗೂ ದುಃಖ ತಂದಿದೆ. ಘಟನೆ ನಡೆದ ತಕ್ಷಣ ಗುಜರಾತ್ ಮುಖ್ಯಮಂತ್ರಿಗೆ ಕರೆ ಮಾಡಿದ್ದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಗೆ ಕರೆ ಮಾಡಿ ಎಲ್ಲಾ ಮಾಹಿತಿಯನ್ನು ಪಡೆದಿದ್ದೇನೆ. ಎಲ್ಲಾ ಸಹಾಯವನ್ನು ಒದಗಿ ಒದಗಿಸುವುದಾಗಿ ಹೇಳಿದ್ದೇನೆ ಎಂದು ಟ್ವೀಟ್ ನಲ್ಲಿ ರಾಜಕೋಟ್ ನಲ್ಲಿ ಅಗ್ನಿ ದುರಂತದಲ್ಲಿ ಸಾವನಪ್ಪಿದವರ ಕುರಿತು ಸಂತಾಪ ಸೂಚಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತ ನಮ್ಮೆಲ್ಲರಿಗೂ ದುಃಖ ತಂದಿದೆ. ಸ್ವಲ್ಪ ಸಮಯದ ಹಿಂದೆ ಅವರೊಂದಿಗೆ ನನ್ನ ದೂರವಾಣಿ ಸಂಭಾಷಣೆಯಲ್ಲಿ, ಗುಜರಾತ್ ಸಿಎಂ ಭೂಪೇಂದ್ರಭಾಯಿ ಪಟೇಲ್ ಜಿ ಅವರು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ನನಗೆ ತಿಳಿಸಿದರು.
The fire tragedy in Rajkot has saddened us all. In my telephone conversation with him a short while ago, Gujarat CM Bhupendrabhai Patel Ji told me about the efforts underway to ensure all possible assistance is provided to those who have been affected. @Bhupendrapbjp
— Narendra Modi (@narendramodi) May 25, 2024