ಚಿತ್ರದುರ್ಗ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಪೆನ್ ಡ್ರೈವ್ ಹಂಚಿಕೆ ಹಿಂದೆ ಎಚ್ಡಿಕೆ ಇದ್ದಾರೆ ಎಂದು ಆರೋಪಿಸಿದ್ದಾರೆ ಈ ಒಂದು ಆರೋಪಕ್ಕೆ ಬಿಜೆಪಿಯ ಮಾರಿ ಸಚಿವ ಸಿಟಿ ರವಿ ತಿರುಗೇಟು ನೀಡಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಲ್ಲಾ ಯಾಕೆ ಸಚಿವ ಕೆ ಎನ್ ರಾಜಣ್ಣ ಅವರೇ ಚಾರ್ಜ್ ಶೀಟ್ ಸಲ್ಲಿಸಲಿ ಎಂದು ಲೇವಡಿ ಮಾಡಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸ್ ಹಿಂದೆ ಎಚ್ಡಿಕೆ ಇದ್ದರೆ ಆರೋಪ ವಿಚಾರವಾಗಿ ಸಚಿವ ರಾಜಣ್ಣ ಹೇಳಿಕೆಗೆ ಮಾಜಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದು, ಎಸ್ಐಟಿ ಯಾಕೆ ರಾಜಣ್ಣ ಅವರೇ ಚಾರ್ಜ್ ಶೀಟ್ ಹಾಕಲಿ.ಪ್ರಕರಣವನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು ಎಂದರು.
ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕು. ಎಸ್ ಐ ಟಿ ಅವರು ರಾಜಣ್ಣರನ್ನೇ ವಿಚಾರಣೆಗೆ ಒಳಪಡಿಸಬೇಕು. ಸತ್ಯಾಸತ್ಯತೆ ಹೊರಬರಲಿ.ಪ್ರಜ್ವಲ್ ಕೆಸ್ ದೊಡ್ಡದು ಮಾಡಿದ್ದೆ ಬಿಜೆಪಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ದೊಡ್ಡ ಮನುಷ್ಯರು. ದೊಡ್ಡವರಂತೆ ನಡೆದುಕೊಳ್ಳಬೇಕು ಸಣ್ಣತನ ತೋರಿಸಬಾರದು ಎಂದು ಸಿಟಿ ರವಿ ತಿಳಿಸಿದರು.