ಮೈಸೂರು : ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲಿ ನಡೆದಿದೆ ಎನ್ನಲಾದ ಲಾಕ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಚನ್ನಗಿರಿ ಪಟ್ಟಣದಲ್ಲಿ ಲಾಕ್ ಡೆತ್ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದಿರುವುದು ಲಾಕಪ್ ಡೆತ್ ಅಲ. ಆರೋಪಿಗೆ ಪಿಟ್ಸ್ ಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರೊಳಗೆ ಆರೋಪಿ ಸಾವನ್ನಪ್ಪಿದ್ದಾನೆ. ಆದರೂಊ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನನ್ನ ಮಗ ರಾಕೇಶ್ ೨೦೧೬ ರಲ್ಲಿ ಸತ್ತು ಹೋಗಿದ್ದಾನೆ. ರಾಕೇಶ್ ಸತ್ತು ೮ ವರ್ಷವಾಗಿದೆ. ಈಗ ರಾಕೇಶ್ ಸಾವಿನ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯಕ್ಕಾಗಿ ಮಗ ರಾಕೇಶ್ ಸಾವಿನ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ರಾಕೇಶ್ ಸತ್ತು ೮ ವರ್ಷಗಳು ಆಗಿದೆ. ಈಗ ಯಾಕೆ ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಈ ವಿಚಾರ ಪ್ರಸ್ತಾಪ ಮಾಡುವುದು ಮೂರ್ಖತನ ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.