ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಗ್ಯಾಂಗ್ ವಾರ್ ಗಳು, ರೇಪ್ ಕೇಸ್ ಗಳು ಕಾಮನ್ ಆಗಿಬಿಟ್ಟಿದೆ ಎಂದು ರಾಜ್ಯ ಬಿಜೆಪಿ ಘಟಕ ವಿಡಿಯೋ ಹರಿಬಿಟ್ಟು ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಕರ್ನಾಟಕ ಮಾಡೆಲ್! ಗ್ಯಾಂಗ್ ವಾರ್‌ಗಳು, ಯುವತಿಯರ ಮೇಲೆ ಅತ್ಯಾಚಾರ, ಹಲ್ಲೆ, ಹತ್ಯೆ, ಬಾಂಬ್ ಬ್ಲಾಸ್ಟ್‌ಗಳು, ಗಾಂಜಾ, ಅಫೀಮು, ರೇವ್ ಪಾರ್ಟಿಗಳು, ಪಾಕೈಸ್ತಾನ್ ಜಿಂದಾಬಾದ್ ಘೋಷಣೆಗಳು ಸೇರಿ ಇತ್ಯಾದಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾಮನ್ ಆಗಿದೆ ಎಂದು ಕಿಡಿಕಾರಿದೆ.
https://x.com/BJP4Karnataka/status/1794238849046229090?ref_src=twsrc%5Etfw%7Ctwcamp%5Etweetembed%7Ctwterm%5E1794238849046229090%7Ctwgr%5Ee6b6080108b50ee0fc46f9b078caebd4b96dee77%7Ctwcon%5Es1_&ref_url=https%3A%2F%2Fkannadadunia.com%2Flive-news%2Fgang-wars-rape-are-common-under-congress-government-new-video-leaked-by-bjp%2F
ಉಗ್ರರು, ಮತಾಂಧರು, ಪುಂಡರು, ಕಿಡಿಗೇಡಿಗಳು ರೌಡಿಗಳಿಗೆ ಸಿದ್ದರಾಮಯ್ಯ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿರುವ ಪರಿಣಾಮವೇ ಇಂದು ಅರಾಜಕತೆ ಸೃಷ್ಟಿಯಾಗಿದೆ. ಇದು ದೇಶಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಕರ್ನಾಟಕ ಮಾಡೆಲ್ ಎಂದು ವಾಗ್ದಾಳಿ ನಡೆಸಿದೆ.