ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡಿದವರವನ್ನೂ ಸರ್ಕಾರ ಅರೆಸ್ಟ್ ಮಾಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಸರ್ಕಾರದ ಪಿತೂರಿಯೂ ಇದೆ. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರವೇ ಹೊರಟಿದೆ. ಹಾಸನದಲ್ಲಿ ಪೊಲೀಸರು ಏನು ಸತ್ತು ಹೋಗಿದ್ದಾರಾ? ಇಂಟೆಲಿಜೆನ್ಸ್ ಮಾಹಿತಿ ಕೊಟ್ಟಿಲ್ಲಾ ಅಂದ್ರ ಸತ್ತು ಹೋಗಿದ್ದಾರಾ? ಪ್ರಕರಣವನ್ನು ಇನ್ನೂ ಯಾಕೆ ಚಾಲಕ ಕಾರ್ತಿಕ್ ನನ್ನು ಬಂಧಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಕರಣ ಸಂಬಂಧ ದೇವರಾಜೇಗೌಡ ಹಾಗೂ ಡಿ.ಕೆ. ಶಿವಕುಮಾರ್ ಆಡಿಯೋ ಸಂಬಂಧ ಇನ್ನೂ ಯಾಕೆ ತನಿಖೆ ಆಗುತ್ತಿಲ್ಲ. ಇದೊಂದು ರೀತಿ ಕುತಂತ್ರ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದ್ದಾರೆ.