ನವದೆಹಲಿ: ಉತ್ತರ ಪ್ರದೇಶದಲ್ಲಿ ಮದುವೆ ಪ್ರಮಾಣ ಪತ್ರ ಪಡೆಯುವುದು ಈಗ ಜನರಿಗೆ ಸ್ವಲ್ಪ ಕಷ್ಟವಾಗಿ ಪರಿಣಮಿಸಿದೆ. ಅದಕ್ಕೆ ಕಾರಣ ಮದುವೆ ಪ್ರಮಾಣ ಪತ್ರವನ್ನು ನೀಡುವುದಕ್ಕೆ ರಾಜ್ಯ ಸರಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಈಗ ಮದುವೆ ಪ್ರಮಾಣ ಪತ್ರವನ್ನು ಪಡೆಯುವಾಗ ವಧು-ವರರು ಕೂಡ ವರದಕ್ಷಿಣೆ ಮಾಹಿತಿ ನೀಡಬೇಕು. ಇದರ ನಂತರವೇ ಪ್ರಮಾಣಪತ್ರ ನೀಡಲಾಗುವುದು ಎನ್ನಲಾಗಿದೆ.
ಸ್ಥಳೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, ಮದುವೆ ಪ್ರಮಾಣಪತ್ರ ಮಾಡಲು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ನಿಯಮಗಳ ಪ್ರಕಾರ, ವಧು ಮತ್ತು ವರನ ಕಡೆಯವರು ಮದುವೆ ಕಾರ್ಡ್, ಆಧಾರ್ ಕಾರ್ಡ್, 10 ನೇ ಅಂಕಪಟ್ಟಿ ಮತ್ತು ಇಬ್ಬರು ಸಾಕ್ಷಿಗಳ ದಾಖಲೆಗಳನ್ನು ಲಗತ್ತಿಸಬೇಕು. ಈಗ ಅದರೊಂದಿಗೆ ವರದಕ್ಷಿಣೆಯ ಅಫಿಡವಿಟ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ, ನೋಂದಣಿ ಇಲಾಖೆಯ ಕಚೇರಿಯ ಹೊರಗೆ ನೋಟಿಸ್ ಸಹ ಹಾಕಲಾಗಿದೆ. ಈ ಅಫಿಡವಿಟ್ನಲ್ಲಿ, ಮದುವೆಗೆ ನೀಡಿದ ವರದಕ್ಷಿಣೆಯ ಬಗ್ಗೆಯೂ ಮಾಹಿತಿಯನ್ನು ನೀಡಬೇಕಾಗುತ್ತದೆ ಎನ್ನಾಗಿದೆ.