ಬೆಳಗಾವಿ : ಪ್ರೀತಿಸುವಂತೆ ಬೆನ್ನುಬಿದ್ದ ಪಾಗಲ್ ಪ್ರೇಮಿಯೊಬ್ಬ ಯುವತಿಯ ಮನೆ ಮೇಲೆ ಕಲ್ಲು ತೂರಾಟ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಗಾವಿಯ ಕಿಣೈ ಗ್ರಾಮದಲ್ಲಿ ನಡೆದಿದೆ.
ಕಿಣೈ ಗ್ರಾಮದ ತಿಪ್ಪಣ ಎಂಬಾತ ಮೂರು ವರ್ಷದಿಂದ ಅದೇ ಗ್ರಾಮದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಯುವತಿ ಬಿಕಾಂ ಓದುತ್ತಿದ್ದು, ನಿತ್ಯ ಕಾಲೇಜಿಗೆ ಹೋಗುವಾಗಲೂ ಮದುವೆಯಾಗುವಂತೆ ರೇಗಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ ಓದು ನಿಲ್ಲಿಸಿದ್ದಾಳೆ. ಆದರೂ ತಿಪ್ಪಣ ಮನೆಗೆ ಹೋಗಿ ಯುವತಿ ತಾಯಿಗೂ ಬೆದರಿಕೆ ಹಾಕಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ತಿಪ್ಪಣ್ಣ, ಮನೆ ಹಿಂಬಾಗಿಲಿನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಇದರಿಂದ ರೋಸಿ ಹೋದ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮತ್ತೆ ತಿಪ್ಪಣ ಯುವತಿಗೆ ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.