Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೇ.21 ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

PCOS ಇನ್ಮುಂದೆ ‘PMOS’ : ಮಹಿಳೆಯರ ಈ ಹಾರ್ಮೋನ್ ಸಮಸ್ಯೆಯ ಹೆಸರು ಬದಲಾವಣೆ.!

Viral : ಮದುವೆ ಮಂಟಪಕ್ಕೂ ಎಂಟ್ರಿ ಕೊಟ್ಟ `ಸ್ವಿಗ್ಗಿ ಇನ್‌ ಸ್ಟಾಮಾರ್ಟ್’ : ವಿಡಿಯೋ ವೈರಲ್ | WATCH VIDEO

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಛತ್ರಿ ಹಿಡಿದು ಬಸ್‌ ಚಾಲನೆ ಮಾಡಿದ ಚಾಲಕ : ವೈರಲ್‌ ವಿಡಿಯೋದ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ
KARNATAKA

ಛತ್ರಿ ಹಿಡಿದು ಬಸ್‌ ಚಾಲನೆ ಮಾಡಿದ ಚಾಲಕ : ವೈರಲ್‌ ವಿಡಿಯೋದ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ

By kannadanewsnow57

ಬೆಂಗಳೂರು : ಮಳೆ ಬರುತ್ತಿರುವಾಗ ಒಂದು ಕೈಯಲ್ಲಿ ಛತ್ರಿ , ಮತ್ತೊಂದು ಕೈಯಲ್ಲಿ ಸ್ಟೀರಿಂಗ್‌ ಹಿಡಿದು ಬಸ್‌ ಚಾಲನೆ ಮಾಡಿದ ವಿಡಿಯೋ ಸಂಬಂಧ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಚಿವರು, ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ‌ ವಿಡಿಯೋ ಕುರಿತು) BJP Karnataka ದವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ‌ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ. ಕೆಲವರಿಗೆ ಕಣ್ಣಿರುತ್ತದೆ ಆದರೆ‌ ನೋಡಲು ಸಾಧ್ಯವಾಗದ ಸ್ಥಿತಿ, ತಲೆ ಇರುತ್ತದೆ ಬುದ್ದಿಯನ್ನು ಸರಿಯಾಗಿ‌ ಉಪಯೋಗಿಸಲಾಗದ ಪರಿಸ್ಥಿತಿ, ಇವೆಲ್ಲವೂ ಅನ್ವಯಿಸುವುದು ಬಸನಗೌಡ ಪಾಟೀಲ್‌ ಯತ್ನಾಳ್ ,‌ ಆರ್.‌ ಆಶೋಕ್, ಡಾ. ಅಶ್ವತ್‌ ನಾರಾಯಣ‌ ಹಾಗೂ ಬಿ.ಜೆ.ಪಿ ಕಣ್ಣು, ತಲೆ ಯಾವುದೂ ಸರಿಯಾಗಿ ಕನೆಕ್ಟ್ ಆಗದೆ‌ ಇರೋ ಪಂಡಿತ ಪುತ್ರರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

ಈ ವಿಡಿಯೋ‌ ನೋಡಿದರೆ ಚಾಲಕ ಹಿಡಿದಿರುವ ಕೊಡೆ ಮೇಲೆ ಒಂದೇ‌ ಒಂದು ಹನಿ‌ ನೀರು‌ ಕಾಣುತ್ತಿಲ್ಲ ಅದನ್ನು ನೋಡುವ, ಯೋಚಿಸುವ ವ್ಯವಧಾನ, ಬುದ್ದಿಯಾದರೂ ಬೇಡವೇ ಇವರಿಗೆ ? ಬಿ.ಜೆ.ಪಿ‌ ಅವಧಿಯಲ್ಲಿ‌ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿರುವ ಕೀರ್ತಿವಂತರು ಇವರು. ಅವರ ಅವಧಿಯಲ್ಲಿ ಹೊಸ‌ ಬಸ್ಸುಗಳ ಸೇರ್ಪಡೆಯಾಗಿಲ್ಲ. ಡಕೋಟ ಬಸ್ಸುಗಳನ್ನು‌ ಕಲ್ಪಿಸಿರುವ ಸಾಧನೆ ಅವರದ್ದೇ ಎಂದು ವಾಗ್ದಾಳಿ ನಡೆಸಿದ್ದಾರೆ.

ನೇಮಕಾತಿಯಂತೂ ಮರೀಚಿಕೆಯೇ‌ ಸರಿ.. ನಮ್ಮ ಅವಧಿಯಲ್ಲಿ‌ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೂ ತಡೆ ನೀಡಿದ್ದ ಕೀರ್ತಿ ಬಿ.ಜೆ.ಪಿ‌ ಅವರಿಗೆ ಸಲ್ಲಬೇಕು. ನಮ್ಮ‌ ಸರ್ಕಾರ ಬಂದೊಡನೆ 5800 ಹೊಸ‌ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ಬಿ.ಜೆ.ಪಿ ಅವಧಿಯಲ್ಲಿ ತಡೆ‌ ಹಿಡಿಯಲಾಗಿದ್ದ ನೇಮಕಾತಿಗೆ ಚಾಲನೆ‌ ನೀಡಲಾಗಿದೆ. 13999 ಹುದ್ದೆಗಳು ಖಾಲಿಯಿದ್ದು, ತಾಂತ್ರಿಕ‌ ಸಿಬ್ಬಂದಿ ಹಾಗೂ ಚಾಲಕ ನಿರ್ವಾಹಕರಿಗೆ ನೇಮಕಾತಿ‌ ಪತ್ರವನ್ನು ವಿತರಿಸಲಾಗಿದೆ. ಇತರೆ ನೇಮಕಾತಿ ಪ್ರಕ್ರಿಯೆಗಳು ಜಾರಿಯಲ್ಲಿವೆ. ಬಿ‌ ಜೆ ಪಿಯವರು ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ದುರಂತ ಕಥೆಗಳನ್ನು‌ ಮತ್ತೊಮ್ಮೆ ಮಗದೊಮ್ಮೆ ನೆನಪಿಸಲು ನಮಗೆ ಅವರೇ ಅವಕಾಶ ಮಾಡಿಕೊಡುವುದರ ಹಿಂದಿನ‌ ಉದ್ದೇಶ, ನಮ್ಮ‌ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗ ಪ್ರಚಾರ ನೀಡುವುದು ಎಂದಾದರೆ ನಮಗೇನು‌ ಅಭ್ಯಂತರವಿಲ್ಲ ಎಂದಿದ್ದಾರೆ.

ಮುಂದುವರೆದು, ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಶ್ರೀ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಶ್ರೀಮತಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30 ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ . ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ. ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಂಡಿರುತ್ತಾರೆ. ಈ ರೀತಿಯ ಬೇಜಾವಬ್ದಾರಿತನದಿಂದ ವರ್ತಿಸಿ, ಸಂಸ್ಥೆಯ ಘನತೆಗೆ ಧಕ್ಮೆ ತಂದ ಚಾಲನಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Transport Minister Ramalinga Reddy clarifies on viral video of driver driving bus with umbrella ಛತ್ರಿ ಹಿಡಿದು ಬಸ್‌ ಚಾಲನೆ ಮಾಡಿದ ಚಾಲಕ : ವೈರಲ್‌ ವಿಡಿಯೋದ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ
Share. Facebook Twitter LinkedIn WhatsApp Email

Related Posts

BREAKING : ಮೇ.21 ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

1 Min Read

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

1 Min Read

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

1 Min Read
Recent News

BREAKING : ಮೇ.21 ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

PCOS ಇನ್ಮುಂದೆ ‘PMOS’ : ಮಹಿಳೆಯರ ಈ ಹಾರ್ಮೋನ್ ಸಮಸ್ಯೆಯ ಹೆಸರು ಬದಲಾವಣೆ.!

Viral : ಮದುವೆ ಮಂಟಪಕ್ಕೂ ಎಂಟ್ರಿ ಕೊಟ್ಟ `ಸ್ವಿಗ್ಗಿ ಇನ್‌ ಸ್ಟಾಮಾರ್ಟ್’ : ವಿಡಿಯೋ ವೈರಲ್ | WATCH VIDEO

BREAKING : ತಮಿಳುನಾಡು ವಿಧಾನಸಭೆಯಲ್ಲಿ ಗೆದ್ದ ಸಿಎಂ ವಿಜಯ್ : `TVK’ ಪಕ್ಷಕ್ಕೆ ಬಹುಮತ ಸಾಬೀತು | TVK party majority

State News
KARNATAKA

BREAKING : ಮೇ.21 ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

By kannadanewsnow57 KARNATAKA 1 Min Read

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟದ 2026ನೇ ಸಾಲಿನ 13ನೇ ಸಭೆಯನ್ನು ಮೇ 21ರಂದು ಕರೆಯಲಾಗಿದೆ. ಸರ್ಕಾರದ ಅಪರ ಕಾರ್ಯದರ್ಶಿ…

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

BIG NEWS : ಕರ್ನಾಟಕದ `MLC’ಗಳಿಗಿರುವ ವೇತನ, ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Karnataka MLC

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.