ಬೆಂಗಳೂರು : 2024-25ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿಗೆ ಕ್ರಿಯಾ ಯೋಜನೆ ಸಲ್ಲಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ಸಂಬಂಧಿಸಿದಂತೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿಗಳಿಗೆ ಅನುಬಂಧ-1ರಲ್ಲಿ ಸಾಮಾನ್ಯ ಅನುಬಂಧ-2ರಲ್ಲಿ ಎಸ್.ಸಿ ಮತ್ತು ಅನುಬಂಧ-3ರಲ್ಲಿ ಎಸ್.ಟಿ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾದ ಅನುದಾನಕ್ಕೆ ಕೆಳಕಂಡ ಷರತ್ತುಗಳನ್ವಯ ಲಗತ್ತಿಸಲಾದ ನಮೂನೆಯಲ್ಲಿ ಕ್ರಿಯಾಯೋಜನೆಯನ್ನು ದಿನಾಂಕ:28.05.2024 ಸಲ್ಲಿಸಲು ತಿಳಿಸಿದೆ.
ಷರತ್ತುಗಳು:
1. 2024-25ನೇ ಸಾಲಿನ ಯು-ಡೈಸ್ ಮಾಹಿತಿ ಅನುಸಾರ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಿಗೆ ಕೊಠಡಿ ದುರಸ್ಥಿ ಅವಶ್ಯಕತೆ ಇರುವ ಬಗ್ಗೆ ಖಾತ್ರಿಪಡಿಸಿಕೊಂಡು ಆದ್ಯತೆ ನೀಡಬೇಕು ಹಾಗೂ ಶಾಲಾ ಕೊಠಡಿ ದುರಸ್ಥಿ ಅವಶ್ಯಕತೆ ಇರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಖಚಿತಪಡಿಸಿಕೊಂಡು ದೃಢೀಕರಿಸಿ ದಿನಾಂಕ:28.05.2024 ರೊಳಗೆ ಕ್ರಿಯಾ ಯೋಜನೆ ಸಲ್ಲಿಸುವುದು,
2. ಈಗಾಗಲೇ ಮಾನ್ಯ ಲೋಕಾಯುಕ್ತರು, ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಯವರು, ಶಾಲಾ ಮುಖ್ಯ ಶಿಕ್ಷಕರು, ಪತ್ರಿಕೆಗಳು/ಮಾಧ್ಯಮ ವರದಿಗಳಲ್ಲಿ ಶಾಲಾ ಕೊಠಡಿಯ ದುರಸ್ಥಿಗೆ ಅವಶ್ಯಕತೆ ಇದೆಯೆಂದು ಬಂದಿರುವ ಮಾಹಿತಿ/ವರದಿಯನ್ನು ಪರಿಶೀಲಿಸಿಕೊಂಡು ಆದ್ಯತೆ ನೀಡಿ ಕ್ರಿಯಾ ಯೋಜನೆ ಸಿದ್ಧಪಡಿಸುವುದು.
3. ಈಗಾಗಲೇ ಕೊಠಡಿಗಳ ದುರಸ್ಥಿ ಅವಶ್ಯಕತೆ ಇರುವ ಪ್ರಸ್ತಾವನೆಯನ್ನು ಈ ಕಛೇರಿಗೆ ಸಲ್ಲಿಸಿದ್ದಲ್ಲಿ, ಆ ಪ್ರಸ್ತಾವನೆಯನ್ನು ಸಹ ಪರಿಶೀಲಿಸಿಕೊಂಡು ಕ್ರಿಯಾ ಯೋಜನೆ ಸಿದ್ಧಪಡಿಸುವುದು ಮತ್ತು ಮಾನ್ಯ ಮುಖ್ಯಮಂತ್ರಿಯವರ ಕಛೇರಿಯಿಂದ, ಮಾನ್ಯ ಸಚಿವರು, ಶಾಸಕರ ಆಪ್ತ ಶಾಖೆಗಳಿಂದ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಸ್ವೀಕೃತಗೊಂಡಿರುವ ಸಾಮಾನ್ಯ ಸ್ವೀಕೃತಿ ಪ್ರಸ್ತಾವನೆಯನ್ನು ಜಿಲ್ಲೆಗಳಿಗೆ ರವಾನಿಸಲಾಗಿದ್ದು, ಸದರಿ ಪ್ರಸ್ತಾವನೆಯನ್ನು ಆಧ್ಯತೆ ಮತ್ತು ಅವಶ್ಯಕತೆಯನುಸಾರ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಳಿಸಿ ಸಲ್ಲಿಸುವುದು. 4. ನಮೂನೆಯಲ್ಲಿ ತಿಳಿಸಲಾದ ಎಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ನೀಡುವುದು ಹಾಗೂ ಅಂದಾಜು
ವೆಚ್ಚವನ್ನು ಪಿ.ಡಬ್ಲ್ಯೂ.ಡಿ/ಪಿ.ಆರ್.ಇ.ಡಿ ಇಲಾಖೆಯಿಂದ ತಮ್ಮ ಹಂತದಲ್ಲಿ ಪಡೆಯುವುದು.
ನಮೂನೆಯಂತೆ ಪೂರ್ಣ ಮಾಹಿತಿ ನೀಡದೇ ಇರುವ ಶಾಲೆಗಳನ್ನು ಪರಿಗಣಿಸುವುದಿಲ್ಲ.
5. ಮೇಲಿನ ಅಂಶಗಳನ್ನು ಒಳಗೊಂಡಂತೆ ಇನ್ನಾವುದೇ ನೈಜ ಅಂಶಗಳಡಿ ಕೊಠಡಿ ದುರಸ್ಥಿ ಅಗತ್ಯತೆ ಇರುವುದು ಕಂಡುಬಂದಲ್ಲಿ ಅವಶ್ಯಕತೆ ಮತ್ತು ಆದ್ಯತೆ ಮೇರೆಗೆ ನಿಯಮಾನುಸಾರ ಪರಿಗಣಿಸುವುದು.
2024-25ನೇ ಸಾಲಿನ ಅನುಮೋದಿತ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕ್ರಿಯಾ ಯೋಜನೆಯನುಸಾರ ನಿಗದಿತ ಅನುದಾನವನ್ನು ವಿದ್ಯಾರ್ಥಿಗಳು ಶೇ.50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಂಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ದುರಸ್ಥಿಗೆ ಬಳಸುವುದು. ಇದರಲ್ಲಿ ಗಡಿ ಪ್ರದೇಶದ ಶಾಲೆಗಳಿಗೆ ಆಧ್ಯತೆ ನೀಡುವುದು.