ಬೆಂಗಳೂರು : ಕೇವಲ ಮೋರಿ ಕಾಮಗಾರಿಗಳಿಗೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ನೆಲಮಂಗಲದ ರಾಘವೇಂದ್ರ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಘವೇಂದ್ರ ನಗರದಲ್ಲಿ ನೆಲಮಂಗಲ ನಗರಸಭೆ ಸದಸ್ಯ ಅಂಜನಮೂರ್ತಿ ಬೆಂಬಲಿಗರು ಹಾಗೂ ಮುನಿರಾಜು ಬೆಂಬಲಿಗರ ನಡುವೆ ಮೋರಿ ಕಾಮಗಾರಿ ಕುರಿತಂತೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ತಕ್ಷಣ ಅವರಿಗೆ ನೆಲಮಂಗಲ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಸಭೆ ಸದಸ್ಯ ಅಂಜನಾಮೂರ್ತಿ, ಅತಿಕ್, ಗೌಸ್, ಸುರೇಂದ್ರ, ಶೇಖರ್, ಮುನಿರಾಜು, ಕುಶಾಲ್, ಕುಮಾರಯ್ಯ ಹಾಗೂ ರಾಧಾಮಣಿ ವಿರುದ್ಧ ಇದೀಗ ನೆಲಮಂಗಲ ಟೌನ್ ಠಾಣೆಯಲ್ಲಿ ಎರಡು ಕಡೆ ಅವರಿಂದ ಕೇಸ್ ದಾಖಲಾಗಿದೆ.