ತುಮಕೂರು : ಕೆಸರಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದವನನ್ನು ಇದೀಗ ಪೊಲೀಸರು ರಕ್ಷಣೆ ಮಾಡಿರುವ ಘಟನೆ ತುಮಕೂರಿನ ಹೊರವಲಯ ದೇವರಾಯಪಟ್ಟಣದ ಕೆರೆಕೋಡಿಯಲ್ಲಿ ನಡೆದಿದೆ.
ಕೆರೆಕೋಡಿಹಳ್ಳದ ಕೆಸರಿನಲ್ಲಿ ಅಪರಿಚಿತ ವ್ಯಕ್ತಿ ಸಿಲುಕಿ ಒದ್ದಾಡುತ್ತಿದ್ದ. ಈ ಕುರಿತು ಕ್ಯಾತ್ಸಂದ್ರ ಠಾಣೆ ಪೊಲೀಸರಿಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ಖುದ್ದು ಪೊಲೀಸರೇ ಕೆಸರಿಗಿಳಿದು ಶೋಧಕಾರ್ಯ ನಡೆಸಿದ್ದರು. ಹುಡುಕಾಟದ ವೇಳೆ ಕೆಸರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಕೈ ಮಾತ್ರ ಕಾಣಿಸಿದೆ. ಕೂಡಲೇ ಕೆಸರಿನಿಂದ ಆತನನ್ನ ಮೇಲಕ್ಕೆತ್ತಿ ಸಾವಿನ ದವಡೆಯಿಂದ ಸಿಬ್ಬಂದಿ ಪಾರು ಮಾಡಿದ್ದಾರೆ.
ಮೇಲಕ್ಕೆತ್ತಿ ಸಾವಿನದ ದವಡೆಯಿಂದ ಪಾರು ಮಾಡಿದ ಸಿಬ್ಬಂದಿ ಕ್ಯಾತ್ಸಂದ್ರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಹೊಯ್ಸಳ ಕಾರು ಚಾಲಕ ಬಸವರಾಜರಿಂದ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ತಕ್ಷಣ ಅಪರಿಚಿತ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರ ಸಮಯ ಪ್ರಜ್ಞೆಗೆ ತುಮಕೂರು ಎಸ್ಪಿ ಅಶೋಕ್ ಶ್ಲಾಘಿಸಿದ್ದಾರೆ. ಕ್ಯಾಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.