ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಇತ್ತೀಚಿಗೆ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು ಕಾಂಗ್ರೆಸ್ ಸಚಿವರೊಬ್ಬರಿಗೆ ಆಪ್ತ ರಾಗಿರುವ ಪ್ರಕರಣದ ಆರನೇ ಆರೋಪಿಗೆ ಇದೀಗ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಪ್ರಕರಣದ ಆರನೇ ಆರೋಪಿ ಯಾಗಿರುವ ಬಿಲ್ಡರ್ ಗೋಪಾಲ್ ರೆಡ್ಡಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.ಇಂದು ಗೋಪಾಲ್ ರೆಡ್ಡಿ ಬಂಧಿಸಲು ಸಿಸಿಬಿ ಪೊಲೀಸರು ತೆರಳಿದ್ದರು ಪ್ರಕರಣದ ಸಂಬಂಧ ದಾಖಲೆ ಸಹಿತ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ ತನಕಾಧಿಕಾರಿ, ಲಕ್ಷ್ಮಿನಾರಾಯಣ ಎದುರು ವಿಚಾರಣೆಗೆ ಬರಲು ನೋಟಿಸ್ ನೀಡಿದ್ದರು
ತೆಲುಗು ನಟಿ ಹೇಮಾ ಅವರಿಗೂ ಕೂಡ ಗೋಪಾಲ್ ರೆಡ್ಡಿ ಹಾಗೂ ಅವರ ಪುತ್ರ ಪರಿಚಯವಿದ್ದರು ಎನ್ನಲಾಗಿದೆ. ಇದೀಗ ಬಿಲ್ಡರ್ ಗೋಪಾಲ್ ರೆಡ್ಡಿ ತಲೆ ಮರೆಸಿಕೊಂಡಿದ್ದು, ಗೋಪಾಲ್ ರೆಡ್ಡಿ ಕಾಂಗ್ರೆಸ್ ಸಚಿವರೊಬ್ಬರ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಲ್ಡರ್ ಗೋಪಾಲ ರೆಡ್ಡಿ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ.ಈಗ ಗೋಪಾಲ್ ರೆಡ್ಡಿಗೆ ಸಿಸಿಬಿ ಪೊಲೀಸರಿಂದ ನೋಟಿಸ್ ನೀಡಲಾಗಿದೆ.
ಕಳೆದ ಮೇ 20 ರಂದು ಬೆಂಗಳೂರಿನ ಜಿ.ಆರ್. ಫಾರ್ಮ್ಹೌಸ್ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಅನುಮಾನದ ಮೇರೆಗೆ ಮೇ 20ರ ಮುಂಜಾನೆ ಸಿಸಿಬಿ ಪೊಲೀಸರು ದಾಳಿ ಮಾಡಿದರು. ಈ ವೇಳೆ ಅನೇಕರು ಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಸಿನಿಮಾ ನಟಿ ಹೇಮಾ ಸೇರಿದಂತೆ ಕಿರುತೆರೆ ನಟ-ನಟಿಯರು ಹಾಗೂ ಮಾಡಲ್ಗಳು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 6 ಜನರನ್ನು ಅರೆಸ್ಟ್ ಮಾಡಲಾಗಿದ್ದು, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.