ಬೆಂಗಳೂರು: ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿಯಲ್ಲಿ ಈಗಾಗಲೇ ಡ್ರಗ್ಸ್ ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿತಗೊಂಡಿದೆ. ಈ ಪಾರ್ಟಿಯಲ್ಲಿ ಸೇರಿದ್ದಂತ 86 ಮಂದಿ ಡ್ರಗ್ ಸೇವನೆ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರೋದಾಗಿ ತಿಳಿದು ಬಂದಿದೆ. ಈ ಬೆನ್ನಲ್ಲೇ ಬೆಂಗಳೂರು ರೇವ್ ಪಾರ್ಟಿ ಕೇಸ್ ಸಂಬಂಧ ಹಲವು ಅನುಮಾನಗಳು ಕಾಡುತ್ತಿವೆ. ಅಲ್ಲದೇ ಪೊಲೀಸರಿಂದಲೇ ಮೌಖಿಕ ಅನುಮತಿ ಪಡೆದು, ಪಾರ್ಟಿ ನಡೆಸಿರೋದಾಗಿಯೂ ಹೇಳಲಾಗುತ್ತಿದೆ. ಆ ಬಗ್ಗೆ ಮುಂದೆ ಓದಿ.
ಹೆಬ್ಬಗೋಡಿ ರೇವ್ ಪಾರ್ಟಿ ಪ್ರಕರಣ ಸಂಬಂಧ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರೇವ್ ಪಾರ್ಟಿಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ವ? ಪೊಲೀಸರ ಮಾಹಿತಿ ಪಡೆಯದೆ ಪಾರ್ಟಿ ಅರೆಂಜ್ ಮಾಡಿದ್ರಾ..? ಅನ್ನೋ ಪ್ರಶ್ನೆ ಮೂಡುತ್ತಿದೆ.
ಇನ್ನೂ ಯಾರ ಬಳಿ ಮಾಹಿತಿ ಕೇಳಬೇಕು ಅಂತ ಗೊಂದಲಕ್ಕೆ ಒಳಗಾಗಿದ್ದಂತ ಅರ್ಗನೈಜರ್, ಹೆಗ್ಗೊಡಿ ಠಾಣೆ ವ್ಯಾಪ್ತಿಯಲ್ಲಿ ಬರ್ತ್ ಡೇ ಪಾರ್ಟಿ ಮಾಡಲು ಸಿದ್ದತೆಗೆ ಮುನ್ನವೇ ಯಾವ ಠಾಣಾ ವ್ಯಾಪ್ತಿ ಅಂತ ಗೊತ್ತಾದೆ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಪರಪ್ಪನ ಅಗ್ರಾಹರ ಪೊಲೀಸರ ಬಳಿ ಮೌಖಿಕ ಅನುಮತಿ ಪಡೆದ ಪಾರ್ಟಿ ಬಾಯ್ಸ್ ಅರೆಂಜ್ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಿ ಏನು ಕೇಳದೆ ಪರಪ್ಪನ ಅಗ್ರಹಾರ ಪೊಲೀಸರು, ಕೇವಲ ಹತ್ತು ಸಾವಿರಕ್ಕಾಗಿ ಪರಿಶೀಲನೆ ನಡಸದೆ ಮೌಖಿಕ ಅನುಮತಿಯನ್ನು ಆರ್ಗನೈಸರ್ ಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಬರ್ತ್ ಡೇ ಪಾರ್ಟಿ ಅಲ್ವಾ ಮಾಡಿಕೊಳ್ಳಿ ಎಂದು ಹತ್ತು ಸಾವಿರ ಪಡೆದಿರುವ ಆರೋಪ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರ ವಿರುದ್ಧ ಕೇಳಿ ಬಂದಿದೆ. ಇನ್ನು ಪಾರ್ಟಿ ನಡೆಯುವ ದಿನ ಅಧಿಕಾರಿಗಳೇ ನೈಟ್ ರೌಂಡ್ಸ್ ಕೂಡ ನಡೆಸಿದ್ದಾರೆ ಎಂಬುದಾಗಿ ತಿಳಿದು ತಿಳಿದು ಬಂದಿದೆ.
ಡಿವೈಎಸ್ ಪಿ ಮೋಹನ್ ಕುಮಾರ್ ಮತ್ತು ಹೆಬ್ಗೊಡಿ ಇನ್ಸ್ಪೆಕ್ಟರ್ ಐ ಎನ್ ರೆಡ್ಡಿ ನೈಟ್ ರೌಂಡ್ಸ್ ಮಾಡಿದ್ದಾರೆ. ಇಬ್ಬರು ನೈಟ್ ರೌಂಡ್ಸ್ ಅಲ್ಲಿ ಇರುವಾಗಲೇ ಭರ್ಜರಿ ಪಾರ್ಟಿ ನಡೆದಿದೆ. ಹಾಗಿದ್ರೆ ಅಧಿಕಾರಿಗಳು ರಾತ್ರಿಪಾಳಿ ಕರ್ತವ್ಯಕ್ಕೆ ಹಾಜರ್ ಅಗಿದ್ರಾ..? ಹಾಜರ್ ಅಗಿದ್ರೆ ಅಷ್ಟು ದೊಡ್ಟ ಪಾರ್ಟಿ ಬಗ್ಗೆ ಮಾಹಿತಿ ಸಿಗಲಿಲ್ವಾ..? ಪಾರ್ಟಿ ನಡೆಸಲು ಪರೋಕ್ಷವಾಗಿ ಇತ್ತಾ ಅಧಿಕಾರಿಗಳ ಗ್ರೀನ್ ಸಿಗ್ನಲ್ ನೀಡಿದ್ರಾ ಅಂತ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನೂ ರಾತ್ರಿಪಾಳಿಯಲ್ಲಿ ಅಧಿಕಾರಿಗಳು ಮಾಡಿದ ರೌಂಡ್ಸ್ ಅದ್ರು ಏನು..? ಈ ಹಿನ್ನೆಲೆ ಹಲವು ಅನುಮಾನಕ್ಕೆ ಅಧಿಕಾರಿಗಳ ನಡೆ ಎಡೆ ಮಾಡಿಕೊಟ್ಟಿದೆ. ಕರ್ತವ್ಯದಲ್ಲಿ ಇದ್ರು ಮಾಹಿತಿ ಇಲ್ಲದ ಕಾರಣ ಚಾರ್ಜ್ ಮೇಮೋ ಕೂಡ ಈಗ ನೀಡಲಾಗಿದೆ. ಡಿವೈಎಸ್ ಪಿ ಮತ್ತು ಇನ್ಸ್ಪೆಕ್ಟರ್ ಗೆ ಚಾರ್ಜ್ ಮೇಮೊ ನೀಡಿದ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿಗೆ ನೀಡಲಾಗಿದೆ. ಇದರ ಜೊತೆಗೆ ಮೂರು ಜನ ಹೆಬ್ಗೊಡಿ ಪೊಲೀಸ್ ಸಿಬ್ಬಂದಿಗಳ ಅಮಾನತ್ತು ಕೂಡ ಮಾಡಲಾಗಿದೆ.
2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ
BREAKING: ‘BBMP ಮುಖ್ಯ ಆಯುಕ್ತ’ರ ಹೆಸರಲ್ಲಿ ‘ಮೆಸೇಜ್’: ‘FIR’ ದಾಖಲು