ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿದೇಶಕ್ಕೆ ಹೋಗಲು ಆತನಿಗೆ ಪಾಸ್ಪೋರ್ಟ್ ನೀಡಿದ್ದು ಕೇಂದ್ರ ಸರ್ಕಾರ ತಾನೇ ಹಾಗಾದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸ್ ನಲ್ಲಿ ಎರಡು ಬಾರಿ ಪತ್ರ ಬರೆದಿದ್ದಾರೆ. ಎರಡು ಬಾರಿ ಪತ್ರ ಬರೆದರು ಪಾಸ್ಪೋರ್ಟ್ ರದ್ದಾಗಿಲ್ಲ. ಪಾಸ್ ಪೋರ್ಟ್ ರದ್ದು ಮಾಡದಿರುವುದು ಯಾರ ತಪ್ಪು? ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ.
ಬಾಯಿಗೆ ಬಂದಂತೆ ಮಾತಾಡಿ ಗೂಬೆ ಕೂರಿಸುವುದು ಒಳ್ಳೆಯದಲ್ಲ. ಕಾನೂನಿನ ಮುಂದೆ ಎಲ್ಲರೂ ಕೂಡ ಒಂದೇ.ಪ್ರಜ್ವಲ್ ಗೆ ಪಾಸ್ಪೋರ್ಟ್ ನೀಡಿದ್ಯಾರು? ಕೇಂದ್ರ ಸರ್ಕಾರ ತಾನೇ? ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು FIR ಆದಮೇಲೆ ಅಲ್ಲ. ಎಫ್ ಐ ಆರ್ ಗಿಂತ ಮೊದಲೇ ಆತ ವಿದೇಶಕ್ಕೆ ಹೋಗಿದ್ದಾನೆ. ದೇವೇಗೌಡರಿಗೆ ಕಳಂಕ ತರವ ಕೆಲಸ ನಮ್ಮ ಪಕ್ಷ ಮಾಡಿಲ್ಲ ಪ್ರಜ್ವಲ್ ಗೆ ತಪ್ಪು ಮಾಡುವಂತ ಕಾಂಗ್ರೆಸ್ ಸಲಹೆ ನೀಡಿತ್ತಾ? ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಎಸ್ಆರ್ ಪಾಟೀಲ್ ಕಿಡಿಕಾರಿದರು.