ಬೆಂಗಳೂರು: ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ? ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ. ಉತ್ತರಿಸಿ ಉತ್ತರ ಕುಮಾರ ಅಂತ ಕರ್ನಾಟಕ ಕಾಂಗ್ರೆಸ್ ಎಕ್ಸ್ ನಲ್ಲಿ ಕಿಡಿಕಾರಿದೆ.
ಇಂದು ಎಕ್ಸ್ ಮಾಡಿರುವಂತ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ ಪಟ್ಟಾಭಿಷೇಕದ ಆಸೆಗಾಗಿ ಆರು ತಿಂಗಳು ಮುಂಚೆನೇ ಡೀಲ್ ವಕೀಲನ ಬಳಸಿಕೊಂಡು ಸಿಡಿ ಬ್ಲಾಕ್ಮೇಲ್ ಮಾಡಿದ ಕೀರ್ತಿ ಬ್ರದರ್ ಸ್ವಾಮಿಗೆ ಸೇರುತ್ತದೆ ಎಂದಿದೆ.
ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ? ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ! ಅಸೆಂಬ್ಲಿಯ ಫಲಿತಾಂಶಕ್ಕೆ ಮೊದಲೇ ಸಿಂಗಾಪುರದಲ್ಲಿ ಕುಳಿತು ಮುಖ್ಯಮಂತ್ರಿ ಕನಸು ಕಂಡ ಬ್ರದರ್ ಸ್ವಾಮಿ ಸಿಗದ ಕುರ್ಚಿಗಾಗಿ ಹತಾಶೆಗೊಂಡು ಏನೆಲ್ಲಾ ಮಾಡಿ ತನ್ನ ಅಣ್ಣನ ಮಗನಂತೆ ಬಯಲಾಗುತ್ತಿದ್ದಾರೆ? ಎಂದು ಪ್ರಶ್ನಿಸಿದೆ.
ಸಿಡಿ ಮಾಡಿದವರ SIT ಮುಂದೆ ನಿಲ್ಲಿಸಲು ಆಗದ ಬ್ರದರ್ ಸ್ವಾಮಿ ತನಿಖೆ ದಾರಿ ತಪ್ಪಿಸಲು ಅಧಿಕಾರಿಗಳ ಜರಿಯುತ್ತಿದ್ದಾರೆ. ಬ್ರದರ್ ಸ್ವಾಮಿ ನಿಮ್ಮ ಬಳಿ ಅಷ್ಟೊಂದು ಧಾಖಲೆ ಇದ್ದರೆ ನೀವೇ SIT ಗೆ ಪ್ರಮಾಣ ಪತ್ರ ನೀಡಿ ಸಾಕ್ಷಿ ಹೇಳಿ? ನೊಂದವರಿಗೆ ಸಾಂತ್ವನ ಹೇಳಿ. ಮನಃಸಾಕ್ಷಿ ಇದ್ದರೆ ನೊಂದವರ ಕ್ಷಮೆ ಕೇಳಿ ಅಂತ ಆಗ್ರಹಿಸಿದೆ.
ಪಲಾಯನ ಬಿಟ್ಟು ರಾಜ್ಯದ ಗೌರವ ಮಣ್ಣು ಪಾಲು ಮಾಡಿ ಹೆಣ್ಣುಮಕ್ಕಳ ಬಾಳಿಗೆ ಕಂಠಕವಾದ ನಿಮ್ಮ ಅಣ್ಣನ ಮಗನಿಗೆ ಬುದ್ದಿ ಕಲಿಸಿ ಮರ್ಯಾದೆ ಉಳಿಸಿಕೊಳ್ಳಿ. ನಿಮ್ಮ ಕುಟುಂಬದ ಒಳ ಜಗಳಕ್ಕೆ ರಾಜ್ಯದ ಹೆಣ್ಣುಮಕ್ಕಳ ಬದುಕಿನೊಂದಿಗೆ ಆಟವಾಡಿ ಈಗ ಪೆನ್ ಡ್ರೈವ್ ಹಂಚಿಕೆ ಹೆಸರಲ್ಲಿ ರಕ್ಷಣೆ ಪಡೆಯುವ ನಾಟಕ ಕೊನೆಗೊಳಿಸಿ ಮಹಾನ್ ಚಿತ್ರ ನಿರ್ಮಾಪಕ ಬ್ರದರ್ ಸ್ವಾಮಿ ಅವರೇ? ಎಂದು ಕೇಳಿದೆ.
ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ ಪಟ್ಟಾಭಿಷೇಕದ ಆಸೆಗಾಗಿ ಆರು ತಿಂಗಳು ಮುಂಚೆನೇ ಡೀಲ್ ವಕೀಲನ ಬಳಸಿಕೊಂಡು ಸಿಡಿ ಬ್ಲಾಕ್ಮೇಲ್ ಮಾಡಿದ ಕೀರ್ತಿ ಬ್ರದರ್ ಸ್ವಾಮಿಗೆ ಸೇರುತ್ತದೆ.
ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ… pic.twitter.com/jqzpxNOcxg
— Karnataka Congress (@INCKarnataka) May 23, 2024
ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರು ಮೌನವೇಕೆ?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ
BREAKING : ಛತ್ತೀಸ್‌ಗಢದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಎನ್‌ಕೌಂಟರ್ : ಏಳು ಮಾವೋವಾದಿಗಳು ಹತ