ಬೆಂಗಳೂರು : ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMEDK) 2024 ರ ಪದವಿಪೂರ್ವ ಪ್ರವೇಶ ಪರೀಕ್ಷೆಯ (UGET) ಫಲಿತಾಂಶವನ್ನ ನಾಳೆ(ಮೇ 24)ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಿದೆ.
COMEDK UGET ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನ ಒಮ್ಮೆ ಘೋಷಿಸಿದ ನಂತರ ಅಧಿಕೃತ ವೆಬ್‌ಸೈಟ್ comedk.org ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.
“24 ಮೇ 2024 ರ ಮಧ್ಯಾಹ್ನ 2 ಗಂಟೆಯಿಂದ ಅಭ್ಯರ್ಥಿ ಲಾಗಿನ್’ನಲ್ಲಿ ಶ್ರೇಣಿ/ಸ್ಕೋರ್ ಕಾರ್ಡ್‌ಗಳು ಲಭ್ಯವಿರುತ್ತವೆ. ಕೌನ್ಸೆಲಿಂಗ್ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
COMEDK UGET 2024 ಶ್ರೇಣಿಯ ಕಾರ್ಡ್ ಪರಿಶೀಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್’ನಲ್ಲಿ ಪಾಸ್‌ವರ್ಡ್’ನೊಂದಿಗೆ ತಮ್ಮ ಅಪ್ಲಿಕೇಶನ್ ಸಂಖ್ಯೆ ಅಥವಾ ಬಳಕೆದಾರ ID ನಮೂದಿಸಬೇಕಾಗುತ್ತದೆ.
ಅಂದ್ಹಾಗೆ, ಮೇ 12, 2024 ರಂದು ದೇಶದಾದ್ಯಂತ 2024ನೇ ಸಾಲಿನ ಕಾಮೆಡ್‌ಕೆ ಪರೀಕ್ಷೆಯನ್ನ ನಡೆಸಲಾಯಿತು. ರಾಜ್ಯದ 24 ನಗರಗಳ 72 ಕೇಂದ್ರಗಳು ಸೇರಿದಂತೆ ದೇಶದ 264 ಕೇಂದ್ರಗಳಲ್ಲಿ ಮೂರು ಅವಧಿಯಲ್ಲಿ ಪರೀಕ್ಷೆ ನಡೆಸಲಾಯಿತು. ಒಟ್ಟಾರೆ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದ, 1.18 ಲಕ್ಷ ವಿದ್ಯಾರ್ಥಿಗಳ ಪೈಕಿ 1,03,799 (ಶೇಕಡ.87.96) ಮಂದಿ ಹಾಜರಾಗಿದ್ದರು. ಕರ್ನಾಟಕದಿಂದ ನೋಂದಣಿಯಾಗಿದ್ದ 38,475 ವಿದ್ಯಾರ್ಥಿಗಳ ಪೈಕಿ 35,124 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಬರ ಪರಿಹಾರದ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳುವಂತಿಲ್ಲ: ‘ಬ್ಯಾಂಕ್’ಗಳಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ
ರಾಜ್ಯಾಧ್ಯಂತ ಕುಡಿಯುವ ನೀರು ಟೆಸ್ಟ್ ಮಾಡಿ ಪೂರೈಸಿ: ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ
ಸೊರಬ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಆನ್‍ಲೈನ್ ಅರ್ಜಿ ಆಹ್ವಾನ