ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ವಿಶ್ವನನ್ನು ಇದೀಗ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಅಲ್ಲದೆ ಇಂದು ಮೃತ ಅಂಜಲಿ ಮನೆಯಲ್ಲಿ ವಿಶ್ವ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರೈಲಿನಿಂದ ಬಿದ್ದು ಗಾಯಗೊಂಡಿದ್ದ ಹಂತಕ ವಿಶ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಕಾರ ಪ್ರಕರಣವನ್ನು ಸಿಐಡಿ ಗೆ ಹಸ್ತಾಂತರಿಸಿದ ನಂತರ ನಿನ್ನೆ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿತ್ತು ಇಂದು ಕಿಂ ಶಾಸ್ತ್ರಿ ಗೆ ಭೇಟಿ ನೀಡಿ, ಆರೋಪಿ ವಿಶ್ವನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ನಂತರ ಆತನನ್ನು ವಶಕ್ಕೆ ಪಡೆಯದ ಸಿಐಡಿ ಅಧಿಕಾರಿಗಳು ಬೆಂಡಿಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಆರೋಪಿ ವಿಶ್ವನ ತಾಯಿ ಶೋಭಾ ಅವರನ್ನು ಕರೆಸಿದ್ದು ಅವರನ್ನು ಕೂಡ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಗಾಗಿ ಹಂತಕ ಅಭಿಮಾನನ್ನು ಕರೆದುಕೊಂಡು ಹೋಬಳಿಯ ವೀರಾಪುರ ಓಣಿಯಲಿರುವ ಮೃತ ಜಲಿ ಮನೆಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಿದ್ದಾರೆ. ನಂತರ ಮತ್ತೆ ವಿಶ್ವವನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ ಎಂದು ಬಲ್ಲಮೂಲಗಳಿಗೆ ತಿಳಿದು ಬಂದಿದೆ.
ಸಿಐಡಿ ಅಧಿಕಾರಗಳ ಮುಂದೆ ಕೊಲೆಯ ಕುರಿತು ಹೇಳಿರುವ ಗಿರೀಶ್, ಮೈಸೂರಿಗೆ ಬರಲು ಯುವತಿ ಅಂಜಲಿ ಒಪ್ಪದಿದ್ದಕ್ಕೆ ಕೊಲೆಯ ಹಿಂದಿನ ದಿನ ಯುವತಿಗೆ ಒಂದು ಸಾವಿರ ಕಳುಹಿಸಿದ್ದ. ಫೋನ್ ಪೇ ಮೂಲಕ ಆರೋಪಿ ವಿಶ್ವ 1000 ರೂಪಾಯಿ ಕಳುಹಿಸಿದ್ದ. 1000 ಹಣ ಪಡೆದು ಅಂಜಲಿ ನಂಬರ್ ಬ್ಲಾಕ್ ಮಾಡಿದ್ದಳು.ಈ ಒಂದು ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸಿಐಡಿ ಅಧಿಕಾರಿಗಳ ಬಳಿ ಆರೋಪಿ ವಿಶ್ವ ಕೊಲೆಯ ರಹಸ್ಯ ಬಾಯಿ ಬಿಟ್ಟಿದ್ದಾನೆ.