ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ರಾಜ್ಯದ ಯಜಮಾನಿ ಮಹಿಳೆಯರ ಬಡವರ ಬಾಳಿನ ಬೆಳಕಾಯಿತು. ಈ ಮೂಲಕ ಅವರ ಅಗತ್ಯತೆಗಳನ್ನು ಈಡೇರಿಸಿಕೊಳ್ಳೋದಕ್ಕೆ ಅನುಕೂಲವಾಗಿದೆ ಅಂತ ಕರ್ನಾಟಕ ಕಾಂಗ್ರೆಸ್ ಹೇಳಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬಡವರ ಬಾಳಿನ ಬೆಳಕಾಯಿತು “ಗೃಹಲಕ್ಷ್ಮಿ“. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಕ್ಕುಬಾಯಿಯವರು 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಿದೆ.
ಗೃಹಲಕ್ಷ್ಮಿ ಹಣದಿಂದ ಬಡವರು ಟಿವಿ, ಫ್ರಿಡ್ಜ್ ನಂತಹ ಸಣ್ಣ ಸಣ್ಣ ಕನಸುಗಳನ್ನು ಈಡೇರಿಸಿಕೊಳ್ಳುವುದು, ಶಿಕ್ಷಣಕ್ಕೆ ನೆರವಾಗುತ್ತಿರುವುದು, ಚಿಕಿತ್ಸೆಗೆ ಸಹಕಾರಿಯಾಗುತ್ತಿರುವುದು ನಮ್ಮಲ್ಲಿ ಸಾರ್ಥಕ ಭಾವ ಮೂಡುತ್ತಿದೆ ಎಂದು ತಿಳಿಸಿದೆ.
ಜನ ಕೇಂದ್ರಿತ ಅಭಿವೃದ್ಧಿ ಎಂದರೆ ಇದೇ, ಜನರ ಬದುಕಲ್ಲಿ ಸರ್ಕಾರದ ಯೋಜನೆಯೊಂದು ನಿರಾಳತೆ ನೀಡುವುದೇ ನೈಜ ಯಶಸ್ಸು ಅಂತ ಹೇಳಿದೆ.
ಬಡವರ ಬಾಳಿನ ಬೆಳಕಾಯಿತು “ಗೃಹಲಕ್ಷ್ಮಿ“.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಕ್ಕುಬಾಯಿಯವರು 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಬಡವರು ಟಿವಿ, ಫ್ರಿಡ್ಜ್ ನಂತಹ ಸಣ್ಣ ಸಣ್ಣ ಕನಸುಗಳನ್ನು ಈಡೇರಿಸಿಕೊಳ್ಳುವುದು,… pic.twitter.com/QHwPcWY8Ho
— Karnataka Congress (@INCKarnataka) May 22, 2024
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ‘ಬೆಂಗಳೂರು ಸಿಟಿ ರೌಂಡ್’ ಹೈಲೈಟ್ಸ್ | Siddramaiah Bengaluru City Rounds
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು