ಬೆಳಗಾವಿ : ಇತ್ತೀಚೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಓಡಾಡುವ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್ ಆಗಿತ್ತು. ಇದೀಗ ಜ್ಯೂಸ್ ಗ್ಯಾಂಗ್ ಆಕ್ಟಿವ್ ಆಗಿದ್ದು, ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿಯೇ ಜ್ಯೂಸ್ ಹಾಗೂ ಬಾಳೆ ಹಣ್ಣು ಕೊಟ್ಟು ನಗನಾಣ್ಯ ದೋಚಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.
ಹೌದು ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಜ್ಯೂಸ್ ಹಾಗೂ ಬಾಳೆಹಣ್ಣು ಮಾರಾಟ ಮಾಡುವ ಸೋಗಿನಲ್ಲಿ ಬಂದು ಪ್ರಯಾಣಿಕರಿಗೆ ಜ್ಯೂಸ್ ಬಾಳೆಹಣ್ಣು ಮಾರಾಟ ಮಾಡಿದ್ದಾರೆ. ಈ ವೇಳೆ ಜ್ಯೂಸ್ ಹಾಗೂ ಬಾಳೇನಲ್ಲಿ ಮೂರ್ಛೆ ಬರುವಂತಹ ಪದಾರ್ಥ ಮಿಶ್ರಣ ಮಾಡಿದ್ದಾರೆ. ಈ ವೇಳೆ ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರಿಂದ ಗ್ಯಾಂಗ್ ಸುಲಿಗೆ ಮಾಡಿದೆ.
ತಕ್ಷಣ ಜ್ಯೂಸ್ ಗ್ಯಾಂಗ್ ಪ್ರಯಾಣಿಕರ ಬಳಿ ಇದ್ದಂತ ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ. ಸದ್ಯ ಹದಿನಾಲ್ಕು ಗಂಟೆಯಿಂದ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಂಜೀವ್ ಖೋತಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.