ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದೆಂದು ತಿಳಿಸಿದ್ದರು. ಅದರಂತೆ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಗಿರೀಶ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ನಿನ್ನೆ ಸಿಐಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ಬಂದಿತ್ತು. ಇಂದು ಸಿಐಡಿ ಅಧಿಕಾರಿಗಳು ಕಿಮ್ಸ್ ಆಸ್ಪತ್ರೆಯಲ್ಲಿರುವ ಆರೋಪಿ ಗಿರೀಶ್ ನನ್ನು ವಿಚಾರಣೆ ನಡೆಸಿ, ಇದೀಗ ಆರೋಪಿ ಗಿರೀಶ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಯಿಂದ ಕರೆದೋಯ್ದಿದ್ದಾರೆ.ಹಂತಕ ಗಿರೀಶ್ ನನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸಿಐಡಿ ಅಧಿಕಾರಗಳ ಮುಂದೆ ಕೊಲೆಯ ಕುರಿತು ಹೇಳಿರುವ ಗಿರೀಶ್, ಮೈಸೂರಿಗೆ ಬರಲು ಯುವತಿ ಅಂಜಲಿ ಒಪ್ಪದಿದ್ದಕ್ಕೆ ಕೊಲೆಯ ಹಿಂದಿನ ದಿನ ಯುವತಿಗೆ ಒಂದು ಸಾವಿರ ಕಳುಹಿಸಿದ್ದ. ಫೋನ್ ಪೇ ಮೂಲಕ ಆರೋಪಿ ವಿಶ್ವ 1000 ರೂಪಾಯಿ ಕಳುಹಿಸಿದ್ದ. 1000 ಹಣ ಪಡೆದು ಅಂಜಲಿ ನಂಬರ್ ಬ್ಲಾಕ್ ಮಾಡಿದ್ದಳು.
ಈ ಒಂದು ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸಿಐಡಿ ಅಧಿಕಾರಿಗಳ ಬಳಿ ಆರೋಪಿ ವಿಶ್ವ ಕೊಲೆಯ ರಹಸ್ಯ ಬಾಯಿ ಬಿಟ್ಟಿದ್ದಾನೆ. ಕಿಮ್ಸ್ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿ ವಿಶ್ವನನ್ನ ವಿಚಾರಣೆ ನಡೆಸುತ್ತಿದ್ದಾರೆ.