ಬೆಂಗಳೂರು: ರಾಜ್ಯದ ಅನೇಕ ಜನರ ಕನಸು ನಗರದಲ್ಲಿ ಒಂದು ಸೈಟು ಖರೀದಿ ಮಾಡಬೇಕು. ಆ ಬಳಿಕ ಮನೆ ಕಟ್ಟಬೇಕು ಅನ್ನೋದು. ಈ ನಿಮ್ಮ ಕನಸಿಗೆ ರಾಜ್ಯ ಸರ್ಕಾರ ನನಸು ಮಾಡೋದಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಜಮೀನು ಖರೀದಿಸಿ, ಲೇಔಟ್ ಮಾಡಿ, ಅವುಗಳನ್ನು ಮಾರಾಟಕ್ಕೆ ಮುಂದಾಗೋ ಸುಳಿವನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ಕಾಮಗಾರಿಗಳು, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಈ ವೇಳೆ ಮಾತನಾಡಿದಂತ ಅವರು, ಖಾಸಗಿ ಲೇಔಟ್ ನಿರ್ಮಾಣ ಮಾಡಿರುವವರಿಗೆ ನಕ್ಷೆ ಮತ್ತು ಲೇಔಟ್ ಅನುಮೋದನೆ ನೀಡುವ ಬದಲು ಆಯ ಪ್ರಾಧಿಕಾರಗಳ ವತಿಯಿಂದ ನೀವೆ ಜಮೀನನ್ನು ಗುರುತಿಸಿ ಖರೀದಿ ಮಾಡಿ ಅಭಿವೃದ್ಧಿ ಪಡಿಸಿ ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ನೀಡಲು ಮುಂದಾಗಬೇಕೆಂದು ತಾಕೀತು ಮಾಡಿದರು.
ಸಾಧ್ಯವಾದ ಮಟ್ಟಿಗೆ ಸರ್ಕಾರಿ ಜಮೀನುಗಳನ್ನು ಗುರುತಿಸಲು ಪ್ರಾಧಿಕಾರಗಳ ಆಯುಕ್ತರು ಮುಂದಾಗಬೇಕು. ಒಂದು ಪಕ್ಷ ಸಾಧ್ಯವಾಗದಿದ್ದಲ್ಲಿ ಕೃಷಿಯೇತರ ಜಮೀನುಗಳನ್ನು ಗುರುತಿಸಿ ಸಂಬಂಧಿಸಿದ ರೈತರೊಂದಿಗೆ ಮಾತನಾಡಿ 50:50 ಅನುಪಾತದಲ್ಲಿಯಾದರು ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ ಕೈಗೊಂಡಿರುವ ಕೆರೆ ಅಭಿವೃದ್ದಿ, ಪಾರ್ಕ್ ಅಭಿವೃದ್ದಿ, ರಸ್ತೆ ಅಭಿವೃದ್ದಿ, ಮೇಲ್ ಸೇತುವೆ ನಿರ್ಮಾಣದಂತಹ ಯಾವುದೇ ಯೋಜನೆಗಳನ್ನು ಆಯಾ ನಗರಾಭಿವೃದ್ದಿ ಪ್ರಾಧಿಕಾರಗಳ ವತಿಯಿಂದಲೇ ನಿರ್ಮಾಣ ಕಾರ್ಯವಾಗಬೇಕು ಮತ್ತು ನಿರ್ಮಾಣದ ನಂತರ ಪ್ರಾಧಿಕಾರದ ಹೆಸರುಗಳನ್ನು ನಮೂದಿಸಬೇಕೆಂದು ಸಚಿವರಾದ ಬೈರತಿ ಸುರೇಶ್ ಸೂಚಿಸಿದರು.
ಬಹಳಷ್ಟು ಪ್ರಾಧಿಕಾರಗಳ ಯಾವುದೇ ಬಡಾವಣೆಗಳನ್ನು ನಿರ್ಮಿಸದೆ ಕೇವಲ ಖಾಸಗಿಯವರು ನಿರ್ಮಿಸಿರುವ ಬಡಾವಣೆಗಳಿಗೆ ಅನುಮೋದನೆ ನೀಡುವುದನ್ನು ರೂಢಿ ಮಾಡಿಕೊಂಡಿದೆ ಇದರಿಂದಾಗಿ ಪ್ರಾಧಿಕಾರಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದು ಮುಚ್ಚ ಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ತಾವುಗಳು ಅಸ್ಪದ ನೀಡದೇ ಮೇಲೆ ಹೇಳಿದಂತೆ ಜಮೀನನ್ನು ಖರೀದಿಸಿ ಅಭಿವೃದ್ದಿ ಪಡಿಸಿ ಜನ ಸಾಮಾನ್ಯರಿಗೆ ನಿವೇಶನಗಳನ್ನು ನೀಡಬೇಕೆಂದು ಸಚಿವರಾದ ಬೈರತಿ ಸುರೇಶ್ ಸೂಚಿಸಿದರು.
ಖಾಸಗಿ ಸಂಸ್ಥೆಗಳಿಂದ ನಿರ್ಮಿಸಲಾಗುತ್ತಿರುವ ಬಡಾವಣೆಗಳಿಗೆ ಆಯಾ ನಗರಾಭಿವೃದ್ದಿ ಪ್ರಾಧಿಕಾರಗಳು ಅನುಮೋದನೆ ನೀಡುವ ಬದಲು ಸರ್ಕಾರದ ವತಿಯಿಂದ ಸ್ವಂತ ಬಡಾವಣೆಗಳನ್ನು ನಿರ್ಮಿಸಿದರೆ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ ಎಂದು ಶ್ರೀ ಬೈರತಿ ಸುರೇಶ ಪ್ರಾಧಿಕಾರ ಆಯುಕ್ತರುಗಳಿಗೆ ತಿಳಿ ಹೇಳಿದರು.
ಪೋನ್ ಕದ್ದಾಲಿಕೆ ಪ್ರಕರಣವನ್ನು CBI ತನಿಖೆಗೆ ವಹಿಸಿ: ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ
BREAKING: ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ‘2.5 TMC ನೀರು’ ಹರಿಸುವಂತೆ ‘CWMA ಸೂಚನೆ’