ಹುಬ್ಬಳ್ಳಿ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ವಿತರಣೆಗೆ ಹಾಜರಾಗುವಂತೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿದೆ. ಆದರೆ ಪ್ರಜ್ವಲ್ ಇದುವರೆಗೂ ಭಾರತಕ್ಕೆ ಬಂದಿಲ್ಲ ಹಾಗಾಗಿ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡಲು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೊಡಲಾಗಿದೆ. ಎರಡು ಮೂರು ನೋಟಿಸ್ ಕೊಟ್ಟಿದ್ದರು ಇದುವರೆಗೂ ಬಂದಿಲ್ಬ. ಬ್ಲೂ ಕಾರ್ನರ್ ನೋಟಿಸ್ ಗೆ ಉತ್ತರ ಬಂದಿಲ್ಲ ಪ್ರಜ್ವಲ್ ಪಾಸ್ಪೋರ್ಟ್ ರದ್ದು ಮಾಡಲು ಪತ್ರ ಬರೆಯುತ್ತೇವೆ ಒಂದು ಹುಬ್ಬಳ್ಳಿಯಲ್ಲಿ ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಇನ್ನು ನನ್ನ ಹಾಗೂ ನನ್ನ ಕುಟುಂಬಸ್ಥರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಅಲ್ಲದೆ ನನ್ನ ಜೊತೆಗೆ ಇರುವ 45 ಜನರ ಫೋನ್ ಕೂಡ ಟ್ಯಾಪ್ ಮಾಡುತ್ತಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ನಾವು ಯಾರು ಫೋನ್ ಟ್ಯಾಪ್ ಮಾಡುತ್ತಿಲ್ಲ.ಯಾರ ಫೋನ್ ಟ್ಯಾಪ್ ಹೇಳಿ ಸುಮ್ಮನೆ ಹೇಳಿಕೆ ಕೊಡುವುದಲ್ಲ. ಅಕಸ್ಮಾತ್ ಖಾಸಗಿಯವರು ಟ್ಯಾಪ್ ಮಾಡಿದರು ದೂರು ಕೊಡಲಿ ಎಂದು ಅವರು ಹೇಳಿದರು.