ಹುಬ್ಬಳ್ಳಿ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ಗೃಹ ಶಿವಾಜಿ ಪರಮೇಶ್ವರ ಅವರು ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಿದ್ದರು ಈ ವೇಳೆ ನೇಹಾ ಪೋಷಕರು ನಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ನಿರಂಜನ್ ಹಿರೇಮಠ ಮನೆಗೆ ಇಂದು ಗೃಹ ಸಚಿವ ಜಿ ಪರಮೇಶ್ವರ್ ಭೇಟಿ ನೀಡಿದರು. ಈ ವೇಳೆ ನೇಹಾ ಪೋಷಕರು ಪರಮೇಶ್ವರ ಬಳಿ ಅಳಲು ತೋಡಿಕೊಂಡರು. ನೇಹಾ ಕುಟುಂಬದವರು ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ನೇಹಾ ತಾಯಿ ಗೀತಾ ಒತ್ತಾಯ ಮಾಡಿದ್ದಾರೆ.
ಇದು ಉದ್ದೇಶಪೂರ್ವಕ ಕೊಲೆ ಎಂದು ನೇಹಾ ತಂದೆ ನಿರಂಜನ್ ಹೇಳಿದ್ದಾರೆ. ಇದು ನನಗೆ ಹಾಗೂ ಪಕ್ಷಕ್ಕೂ ತೀವ್ರ ಮುಜುಗರ ತಂದಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಮತ್ತೊಂದು ಕೊಲೆಯಾಗಿದೆ. ಆರೋಪಿಗೆಗಳು ಶಿಕ್ಷೆ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ವೈಯಕ್ತಿಕವಾಗಿ ನಾನು ನಿಮ್ಮ ಅಭಿಮಾನಿ.ನೀವು ಹೆಣ್ಣು ಮಕ್ಕಳ ಮೇಲೆ ಅಪಾರ ಕಾಳಜಿ ಹೊಂದಿರುವವರು. ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಗೃಹ ಸಚಿವ ಜಿ ಪರಮೇಶ್ವರಿಗೆ ನೇಹಾ ತಂದೆ ನಿರಂಜನ್ ಹಿರೇಮಠ್ ಮನವಿ ಮಾಡಿಕೊಂಡರು.
ಇದಕ್ಕೂ ಮುಂಚೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮೃತ ಅಂಜಲಿ ಅಂಬಿಗೇರ್ ಮನೆಗೂ ಕೂಡ ಗೃಹ ಸಚಿವರು ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರಿಗೆ ಗೃಹ ಸಚಿವರು ಸಾಂತ್ವನ ಹೇಳಿದರು. ನಂತರ ಘಟನೆಯ ಕುರಿತಂತೆ ಅಧಿಕಾರಿಗಳಿಂದ ಸಂಪೂರ್ಣ ವಾದಂತಹ ಮಾಹಿತಿಯನ್ನು ಪಡೆದುಕೊಂಡರು.