ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿ ಕೆ ಆರ್ ನಗರ ಹೊಳೆನರಸೀಪುರದಲ್ಲಿ ಇದೀಗ ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲಾಗಿವೆ. ಈ ವರೆಗೆ ಎಸ್ಪಿಪಿ ಆಗಿ ಮೂವರನ್ನು ಸರ್ಕಾರ ನೇಮಿಸಿತ್ತು. ಇದೀಗ ಹೈಕೋರ್ಟ್ ನಲ್ಲಿ ವಾದಿಸಲೆಂದೆ ಪ್ರೊಫೆಸರ್ ರವಿವರ್ಮ ಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಪ್ರಜ್ವಲ್ ಹಾಗೂ ಎಚ್ ಡಿ ರೇವಣ್ಣ ಆರೋಪಿಯಾಗಿರುವಂತಹ ಪ್ರಕಾರಣಗಳಾಗಿವೆ.
ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 27ರಂದು ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಹಲವಾರು ಬಾರಿ ನೋಟಿಸ್ ನೀಡಿದರು ಇದುವರೆಗೂ ಯಾವುದೇ ರೀತಿಯಾಗಿ ಸ್ಪಂದಿಸಿಲ್ಲ.ಹಾಗಾಗಿ ಎಸ್ಐಟಿ ಬಂಧನದ ವಾರೆಂಟ್ ಜಾರಿ ಮಾಡಿದೆ.ಹಾಗಾಗಿ ಸದ್ಯದಲ್ಲೇ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.