ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಇಂದಿನಗೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದು, ಸಿಎಂ ಕುರ್ಚಿಗೇರಲು ಡಿಸಿಎಂ ಕನಸು, ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್ ಆಶೋಕ್, ಕುಸಿದ ಕಾನೂನು ಸುವ್ಯವಸ್ಥೆ, ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ, ಏರುತ್ತಲೇ ಇದೆ ಸಾಲದ ಹೊರೆ, ಅಭಿವೃದ್ದಿ ಮಾತ್ರ ಕಣ್ಮರೆ.
ನಾಲಾಯಕ್ ಸಚಿವರುಗಳು. ಸಾಲು ಸಾಲು ಎಡವಟ್ಟುಗಳು.ಸಿಎಂ ಕುರ್ಚಿಗೇರಲು ಡಿಸಿಎಂ ಕನಸು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು. ಜಾತಿಗೊಂದು, ಜಿಲ್ಲೆಗೊಂದು ಬಣ. ನಾಡಿನ ಅಭಿವೃದ್ದಿ ಮಾತ್ರ ಗೌಣ, ಇದು ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಕಥೆ. ಳೂವರೆ ಕೋಟಿ ಕನ್ನಡಿಗರ ದಿನನಿತ್ಯದ ವ್ಯಥೆ ಎಂದು ಕಿಡಿಕಾರಿದ್ದಾರೆ.
ಕುಸಿದ ಕಾನೂನು ಸುವ್ಯವಸ್ಥೆ
ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆಏರುತ್ತಲೇ ಇದೆ ಸಾಲದ ಹೊರೆ
ಅಭಿವೃದ್ದಿ ಮಾತ್ರ ಕಣ್ಮರೆನಾಲಾಯಕ್ ಸಚಿವರುಗಳು
ಸಾಲು ಸಾಲು ಎಡವಟ್ಟುಗಳುಸಿಎಂ ಕುರ್ಚಿಗೇರಲು ಡಿಸಿಎಂ ಕನಸು
ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸುಜಾತಿಗೊಂದು, ಜಿಲ್ಲೆಗೊಂದು ಬಣ
ನಾಡಿನ ಅಭಿವೃದ್ದಿ ಮಾತ್ರ ಗೌಣಇದು ಕಾಂಗ್ರೆಸ್… pic.twitter.com/Iy7fZ4YG8c
— R. Ashoka (ಮೋದಿ ಅವರ ಕುಟುಂಬ) (@RAshokaBJP) May 20, 2024