ದಾವಣವೆರೆ : ಕಳೆದ ಎರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಹಣಕ್ಕಾಗಿ ಸ್ವಂತ ಅಳಿಯನನ್ನೇ ಚಾಕುವಿನಿಂದ ಹಿಡಿದು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ
ದಾವಣಗೆರೆ ಗ್ರಾಮಾಂತರ ಪೊಲೀಸರಿಂದ ಮನೋಹರ್ (27) ಬಂಧನ ಮೇ 16ರಂದು ಚಾಕುವಿನಿಂದ ಇರಿದು ಸುದೀಪ್ (24) ಎನ್ನುವ ಯುವಕನ ಕೊಲೆ ಕೊಲೆಮಾಡಿದ್ದ . ದಾವಣಗೆರೆ ತಾಲೂಕಿನ ಓಬಜ್ಜಿಹಳ್ಳಿ ಸಮೀಪ ಈ ಒಂದು ಕೊಲೆ ಪ್ರಕರಣ ನಡೆದಿತ್ತು. ಕೊಲೆಯಾದ ಸುದೀಪ್ ತಂದೆಯ ತಂಗಿ ಪುತ್ರ ಆರೋಪಿ ಮನೋಹರ್ ಎಂದು ಹೇಳಲಾಗುತ್ತಿದೆ.
ಇಬ್ಬರು ದಾವಣಗೆರೆಯ ಬೂದಿಹಾಳ ರಸ್ತೆಯ ಎಸ್ ಪಿ ಎಸ್ ನಗರದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸಹೋದರರಿಬ್ಬರ ಜೊತೆ ಸೇರಿ ಸುದೀಪ್ ನನ್ನು ಹತ್ಯೆಗೈದಿದ್ದ. ಇದೀಗ ಮನೋಹರ್ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸುದೀಪ್ ಪತ್ನಿ ಒತ್ತಾಯ ಮಾಡಿದ್ದಾರೆ.