ದಾವಣಗೆರೆ ; ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಹಾಗೂ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ 2024-25ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ಮೇ.19 ರಂದು ನಡೆಸಲಾಗುವುದು.
ವಿದ್ಯಾರ್ಥಿಗಳ ಪ್ರವೇಶ ಪತ್ರ (HALL TICKET) ವನ್ನು ಆಯಾ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ವಿತರಿಸಲಾಗುತ್ತಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕಾಗಿ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಪಡೆದುಕೊಳ್ಳುವಂತೆ ತಿಳಿಸಿದೆ.
ಪ್ರವೇಶ ಪತ್ರ ಪಡೆಯಲು ಬರುವ ವಿದ್ಯಾರ್ಥಿ, ಪೋಷಕರು ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ, ಆಧಾರಕಾರ್ಡ್, ಅರ್ಜಿ ಸಲ್ಲಿಸಿರುವ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ಬಿಜೆಪಿ-ಜೆಡಿಎಸ್ ಸರಕಾರವು ಶಿಕ್ಷಕರ ಪಿಂಚಣಿಯನ್ನು ಕಿತ್ತುಕೊಂಡಿವೆ- ಡಾ.ಕೆ ಕೆ ಮಂಜುನಾಥ್ ಕುಮಾರ್
BREAKING: ರಾಜ್ಯ ಸರ್ಕಾರದಿಂದ ‘ಅಭಿವೃದ್ಧಿ ಕಾಮಗಾರಿ’ಗಳಿಗೆ ‘ಮಾದರಿ ನೀತಿ ಸಂಹಿತೆ’ಯಿಂದ ವಿನಾಯ್ತಿ ನೀಡಿ ಆದೇಶ