ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಸುಕಿನ ಜಾವ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದ್ದು ಅಂಜಲಿ ಕುಟುಂಬಕ್ಕೆ ಒಂದು ವೇಳೆ ಸರ್ಕಾರದಿಂದ ಪರಿಹಾರ ದೊರಕದೇ ಹೋದರೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು
ಸುದ್ಧಿಗಾರರೊಂದಿಗೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದ್ದು, ಹುಬ್ಬಳ್ಳಿಯಲ್ಲಿ ಎರಡು ಅಮಾನುಷ ಕೃತ್ಯಗಳು ನಡೆದಿದೆ.ಈ ಘಟನೆಯಿಂದ ಸಮಾಜ ಕಾನೂನು ತಲೆತಗ್ಗಿಸುವಂತೆ ಆಗಿದೆ.ಕಾನೂನಿನ ಬಗ್ಗೆ ಭಯ ಇಲ್ಲವಾಗಿದೆ.ಹೋರಾಟ ಹತ್ತಿಕ್ಕಲು ಮಾತ್ರ ಪೊಲೀಸ್ ಇಲಾಖೆ ಇದೆ.ಅನ್ಯಾಯ ಹಕ್ಕಿಗೂ ಕೆಲಸ ಪೊಲೀಸ ಇಲಾಖೆ ಮಾಡುತ್ತಿಲ್ಲ ಎಂದರು.
ನೇಹಾ ಕೊಲೆ ಬಳಿಕ ರಾಜ್ಯ ಸರ್ಕಾರ ಸೂಕ್ತ ಕಾನೂನು ತಂದಿಲ್ಲ ಅಂಜಲಿ ಕುಟುಂಬಸ್ಥರಿಗೆ ಪರಿಹಾರ ಮನೆ ಸರ್ಕಾರಿ ನೌಕರಿ ನೀಡಬೇಕು ಆರೋಪಿಗೆ ಮರಣದಂಡನೆ ವಿಧಿಸಬೇಕು ಅಂಜಲಿ ಕುಟುಂಬಕ್ಕೆ ಪರಿಹಾರ ಸಿಗದಿದ್ದರೆ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಲಾಗುತ್ತದೆ ಅದು ಹುಬ್ಬಳ್ಳಿಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದರು.