ಬೆಂಗಳೂರು : ನಾಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಅತ್ಯಂತ ರೋಚಕವಾದಂತಹ ಪಂದ್ಯ ನಡೆಯಲಿದೆ. ಹೀಗಾಗಿ ಇಂದೇ ಅಭಿಮಾನಿಗಳು ಸ್ಟೇಡಿಯಂನತ್ತ ಆಗಮಿಸಿ ಮುಂಗಡವಾಗಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಆದರೆ ಚಿನ್ನಸ್ವಾಮಿ ಕ್ರೀಡಾಂಗಣದವರೇ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಇದೀಗ ಗಂಭೀರವಾದಂತಹ ಆರೋಪ ಮಾಡುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಗಾಗಿ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಾಳೆ ಆರ್‌ಸಿಬಿ ಹಾಗೂ ಸಿಎಸ್ಕೆ ಮ್ಯಾಚ್ ನಡೆಯಲಿದೆ. ಹಾಗಾಗಿ ಈಗಾಗಲೇ ಸ್ಟೇಡಿಯಂ ಬಳಿ ಸಾವಿರಾರು ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ.
ಆರ್‌ಸಿಬಿ ಮ್ಯಾಚ್ ನೋಡಲೇಬೇಕೆಂದು ಸ್ಟೇಡಿಯಂ ಬಳಿಗೆ ಬಂದಿದ್ದೇವೆ. ಆದರೆ ಹೆಚ್ಚಿನದರಕ್ಕೆ ಬ್ಲಾಕ್ ನಲ್ಲಿ ಟಿಕೆಟ್ ಮಾರುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. Online ಅಲ್ಲಿ ಐಪಿಎಲ್ ಟಿಕೆಟ್ ಸೋಲ್ಡ್ ಔಟ್ ಎಂದು ಪ್ರಕಟಿಸಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದವರೇ ಬ್ಲಾಕ್ ನಲ್ಲಿ ಟಿಕೆಟ್ ಮಾರುತ್ತಿದ್ದಾರೆ.
1500 ರೂ. ಟಿಕೆಟ್ಗೆ ರೂ.10,000 ಹೇಳುತ್ತಿದ್ದಾರೆ 3,000 ಟಿಕೆಟ್ಗೆ 15 ರಿಂದ 20 ಸಾವಿರ ರೂಪಾಯಿ ಅಂತಿದ್ದಾರೆ.ನಮ್ಮ ಬಳಿ ಹಣ ಪಡೆದು ಟಿಕೆಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ ಟಿಕೆಟ್ ತೋರಿಸಿ ಆಮೇಲೆ ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದೇವೆ ಸ್ಟೇಡಿಯಮ್ ನಿಂದ ದೂರಕ್ಕೆ ಕರೆದುಕೊಂಡು ಮಾತುಕತೆ ನಡೆಸುತ್ತಾರೆ. ದುಡ್ಡು ಇಸ್ಕೊಂಡು ಓಡಿ ಹೋದರೆ ನಾವು ಯಾರನ್ನು ಕೇಳೋದು ನಾಳಿನ ಆರ್‌ಸಿಬಿ ಮ್ಯಾಚ್ ಟಿಕೇಟು ಇಲ್ಲ ಹಣ ಕಳ್ಕೋಬೇಕಾಗುತ್ತೆ ಎಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಅಭಿಮಾನಿಗಳು ಇದೀಗ ಆಕ್ರೋಶ ಹೊರಹಾಕಿದ್ದಾರೆ.