ನವದೆಹಲಿ: ನಾಲ್ಕು ಹಂತಗಳ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬಂಗಾವ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಲೋಕಸಭಾ ಚುನಾವಣೆಯ ನಾಲ್ಕು ಹಂತಗಳ ಮತದಾನ ಪೂರ್ಣಗೊಂಡಿದೆ, 380 ಸ್ಥಾನಗಳಿಗೆ ಮತದಾನ ಮಾಡಲಾಗಿದೆ. ಬಂಗಾಳದಲ್ಲಿ 18 ಸ್ಥಾನಗಳಿಗೆ ಮತದಾನ ಮುಗಿದಿದೆ. 380 ಸ್ಥಾನಗಳಲ್ಲಿ, ಪ್ರಧಾನಿ ಮೋದಿ ಈಗಾಗಲೇ 270 ಸ್ಥಾನಗಳೊಂದಿಗೆ ಪೂರ್ಣ ಬಹುಮತವನ್ನು ಪಡೆದಿದ್ದಾರೆ ಎಂದು ನಾನು ನಿಮಗೆ ಹೇಳಬೇಕು” ಎಂದು ಅವರು ಹೇಳಿದರು.
ಮಾಟುವಾ ಸಮುದಾಯದ ಭದ್ರಕೋಟೆಯಲ್ಲಿ ಮಾತನಾಡಿದ ಶಾ, ಸಿಎಎ ಅಡಿಯಲ್ಲಿ ಅವರ ಸದಸ್ಯರಿಗೆ ಪೌರತ್ವದ ಭರವಸೆ ನೀಡಿದರು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.