ಕೋಲಾರ: ರಾಜ್ಯದಲ್ಲಿ ನೀಚ ಕೃತ್ಯ ಎನ್ನುವಂತೆ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಒಬ್ಬ ಕೆಲಸದ ಅವಧಿಯಲ್ಲೇ ಮಹಿಳಾ ಸಿಬ್ಬಂದಿಯೊಬ್ಬರೊಂದಿಗೆ ರೋಮ್ಯಾನ್ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ಸಂತ್ರಸ್ತೆಗೆ ವೀಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹಂಚೋದಾಗಿಯೂ ಬ್ಲಾಕ್ ಮೇಲ್ ಮಾಡಿದ್ದಾನೆ.
ಕೋಲಾರ ಜಿಲ್ಲೆಯ ಕೆಜಿಎಫ್ ನ ರಾಮಸಾಗರ ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಎಂಬಾತ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರೋದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯ್ತಿಯಲ್ಲೇ ಕೆಲಸದ ವೇಳೆ ಬಲವಂತವಾಗಿ ಮಹಿಳಾ ಸಿಬ್ಬಂದಿಯೊಂದಿಗೆ ರೊಮ್ಯಾನ್ಸ್ ಮಾಡಿರುವಂತ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ, ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.
ಈ ಖಾಸಗಿ ವೀಡಿಯೋವನ್ನು ಇಟ್ಕೊಂಡಿದ್ದಂತ ಅರ್ಜುನ್, ಮಹಿಳಾ ಸಿಬ್ಬಂದಿಗೆ ಖಾಸಗಿ ಪೋಟೋ, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆ ಮಾಡೋದಾಗಿಯೂ ಬೆದರಿಕೆ ವೊಡ್ಡಿದ್ದಾನೆ.
ಬಿಲ್ ಕಲೆಕ್ಟರ್ ಬೆದರಿಕೆಗೆ ಬೆಚ್ಚಿದಂತ ಮಹಿಳಾ ಸಿಬ್ಬಂದಿ, ಬೇತಮಂಗಲ ಪೊಲೀಸ್ ಠಾಣೆಗೆ ತೆರಳಿ, ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ, ಪೊಲೀರು ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣನನ್ನು ಬಂಧಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ
`BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್