ತುಮಕೂರು : ಹಳ್ಳದಲ್ಲಿ ನೀರು ಕುಡಿದು ವಾಪಸ್ ಆಗುತ್ತಿದ್ದ ವೇಳೆ ರೈಲು ಹಳೆಯ ಮೇಲೆ ಕುರಿಮಂದೆ ಮೇಲೆ ರೈಲು ಹರಿದು ಸುಮಾರು 15 ಲಕ್ಷ ಮೌಲ್ಯದ 46 ಕುರಿಗಳು ಧಾರಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿಯಲ್ಲಿ ಎಂಬಲ್ಲಿ ನಡೆದಿದೆ.
ನಿಡವಂದ ಗ್ರಾಮದ ಬಳಿ ರೈಲು ಹರಿದು 46 ಕುರಿಗಳ ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ರೈತ ದೇವರಾಜುಗೆ ಸೇರಿದ ಕುರಿಗಳು ಎಂದು ಹೇಳಲಾಗುತ್ತಿದೆ.ಕೆರೆಯಲ್ಲಿ ನೀರು ಕುಡಿದು ಹಿಂತಿರುಗುತ್ತಿದ್ದ ವೇಳೆ ಮಂದೆ ಮೇಲೆ ರೈಲು ಹರಿದಿದೆ.
ಈ ವೇಳೆ ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 46 ಕುರಿಗಳನ್ನು ರೈತ ದೇವರಾಜು ಕಳೆದುಕೊಂಡಿದ್ದಾನೆ. ಘಟನೆ ಕುರಿತಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.