ಬೆಂಗಳೂರು: ದೊಡ್ಡ ತಿಮಿಂಗಿಲ ಹಿಡಿದ್ರೆ ಎಲ್ಲಾ ಸತ್ಯ ಹೊರಬರುತ್ತೆ ಅಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಮಾತನಾಡುತ್ತ ನನ್ನ ವಿರುದ್ಧ ಮಾತನಾಡೋಕೆ ಶಾಸಕರಿಗೆ ದೊಡ್ಡ ತಿಮಿಂಗಲವೇ ಹೇಳಿರೋದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಇನ್ನೂ ದೇವರಾಜೇಗೌಡ ಬಂಧಿಸಿ ಯಾವ ದಾಖಲೆಯನ್ನ ಈ ಸರ್ಕಾರ ವಶಪಡಿಸಿಕೊಳ್ಳೋಕೆ ಹೊರಟಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.